ತಂದೆ–ತಾಯಿಯಾಗುವ ಕನಸು ಕಾಣುತ್ತಿರುವ ಅನೇಕ ದಂಪತಿಗಳಿಗೆ, ಆಧುನಿಕ ವೈದ್ಯಕೀಯ ವಿಜ್ಞಾನವು ಅವರಿಗೆ ನಂಬಿಕೆಯ ಹೊಸ ಬೆಳಕಾಗಿದೆ. ಇಂದು ವೈದ್ಯಕೀಯ ತಂತ್ರಜ್ಞಾನವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಹಿಂದೆ ಅಸಾಧ್ಯ ಎಂದು ಭಾವಿಸಿದ್ದ ಬಂಜೆತನದ ಸಮಸ್ಯೆಗಳಿಗೂ ಪರಿಣಾಮಕಾರಿ ಪರಿಹಾರಗಳು ಇಂದು ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಲಭ್ಯವಿವೆ. ನೀವು ಕೋಲಾರದಲ್ಲಿ ಐವಿಎಫ್ (IVF) ಚಿಕಿತ್ಸೆಯನ್ನು ಹುಡುಕುತ್ತಿದ್ದರೆ, ನಿಮಗೆ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಗಳಲ್ಲಿ ಕೊಡುವ ಮಾಹಿತಿಗಳು ನಿಮ್ಮ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ಅನೇಕ ದಂಪತಿಗಳ ಪಾಲಿಗೆ ಸಂತೋಷದಾಯಕ ಸುದ್ದಿಯನ್ನು ತಂದಿದೆ. ನಮ್ಮಲ್ಲಿ ನುರಿತ ತಜ್ಞರ ವೈಜ್ಞಾನಿಕ ಮಾರ್ಗದರ್ಶನದಲ್ಲಿ ನಿಮ್ಮ ಗರ್ಭಧಾರಣೆಯ ಪಯಣವನ್ನು ಪ್ರಾರಂಭಿಸುವುದು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ. ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ತಜ್ಞರ ಆಯ್ಕೆಯು ನಿಮ್ಮ ಚಿಕಿತ್ಸೆಯ ಯಶಸ್ಸಿನ ಪ್ರಮಾಣವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ನಲ್ಲಿ ಫರ್ಟಿಲಿಟಿ ಆರೈಕೆ ಪಯಣ
ಕೋಲಾರದಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯು ಪ್ರತಿಯೊಂದು ಹಂತದ ವಿವರವಾದ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ. ನಮ್ಮ ಅನುಭವಿ ಫಲವತ್ತತೆ ತಜ್ಞರು ಚಿಕಿತ್ಸಾ ಯೋಜನೆಯನ್ನು ಶಿಫಾರಸು ಮಾಡುವ ಮೊದಲು ದಂಪತಿಯ ವೈದ್ಯಕೀಯ ಇತಿಹಾಸ, ರೋಗನಿರ್ಣಯದ ವರದಿಗಳು, ಜೀವನಶೈಲಿ ಅಂಶಗಳು ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ. ಹೀಗಾಗಿ, ಚಿಕಿತ್ಸೆಯು ಕೇವಲ ಸಾಮಾನ್ಯ ಪ್ರೋಟೋಕಾಲ್ ಮೇಲೆ ಅವಲಂಬಿತವಾಗಿರದೆ, ಪ್ರತಿಯೊಬ್ಬ ದಂಪತಿಯ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ರೂಪಿಸಲ್ಪಡುತ್ತದೆ.
ನಮ್ಮ ದೃಷ್ಟಿಕೋನ: ಚಿಕಿತ್ಸಾರ್ಥಿ-ಕೇಂದ್ರಿತ ಅನುಭವ
ನಮ್ಮ ಚಿಕಿತ್ಸಾ ಪದ್ಧತಿಯು ಕೇವಲ ವೈದ್ಯಕೀಯ ಚಿಕಿತ್ಸೆಗೆ ಸೀಮಿತವಾಗಿಲ್ಲ. ಚಿಕಿತ್ಸೆಗೆ ಒಳಗಾದವರ ಮಾನಸಿಕ ಆರೋಗ್ಯ ಮತ್ತು ಅವರ ಆತಂಕಗಳನ್ನು ಅರ್ಥಮಾಡಿಕೊಂಡು, ಅವರಿಗೆ ಪಾರದರ್ಶಕವಾದ ಮಾರ್ಗದರ್ಶನವನ್ನು ನೀಡುವುದು ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.
ಪೋಷಕರಾಗುವ ನಿಮ್ಮ ಕನಸಿನ ಪಯಣಕ್ಕೆ ಬಿರ್ಲಾ ಫರ್ಟಿಲಿಟಿ ಏಕೆ ಅತ್ಯುತ್ತಮ ಆಯ್ಕೆ?
ಐವಿಎಫ್ ಚಿಕಿತ್ಸೆಗೆ ಒಳಗಾಗುವ ಪ್ರತಿ ದಂಪತಿಗಳ ಪಾಲಿಗೆ, ಐವಿಎಫ್ ಚಿಕಿತ್ಸಾ ಪದ್ಧತಿಯ ಆಯ್ಕೆಯಲ್ಲಿ ಹಾಗೂ ಅತ್ಯತ್ತಮ ಚಿಕಿತ್ಸಾ ಕೇಂದ್ರಗಳ ಆಯ್ಕೆಯಲ್ಲಿ ಹಲವಾರು ಗೊಂದಲವನ್ನು ಸೃಷ್ಟಿಸುತ್ತವೆ. ಆದರೆ ನಿಮ್ಮ ಆಯ್ಕೆಗಾಗಿ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ವಿಶ್ವಾಸಾರ್ಹವಾಗಿದೆ:
- ಅನುಭವಿ ತಜ್ಞರು: 130 ಕ್ಕೂ ಹೆಚ್ಚು ತಜ್ಞರ ತಂಡವು ನಿಮ್ಮೊಂದಿಗೆ ಸದಾ ಇರುತ್ತದೆ.
- ಅತ್ಯಾಧುನಿಕ ತಂತ್ರಜ್ಞಾನ: ಚಿಕಿತ್ಸೆಗಾಗಿ ಆಧುನಿಕ ಎಂಬ್ರಿಯಾಲಜಿ ಲ್ಯಾಬ್ಗಳು ಮತ್ತು AI-ಚಾಲಿತ ತಾಂತ್ರಿಕತೆ.
- ಪಾರದರ್ಶಕತೆ: ಚಿಕಿತ್ಸೆಗೆ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಪ್ಯಾಕೇಜುಗಳು.
- ಹೆಚ್ಚಿನ ಯಶಸ್ಸಿನ ದರ: ನಮ್ಮ ಯಶಸ್ವಿ ಐವಿಎಫ್ ಹಂತಗಳು ಮತ್ತು ತೃಪ್ತ ದಂಪತಿಗಳ ನಂಬಿಕೆಯೇ ನಮ್ಮ ಹೆಗ್ಗಳಿಕೆ.
ಕೋಲಾರದ ನಮ್ಮ ಐವಿಎಫ್ ಕೇಂದ್ರದಲ್ಲಿ ಲಭ್ಯವಿರುವ ಫರ್ಟಿಲಿಟಿ ಚಿಕಿತ್ಸೆಗಳು ಮತ್ತು ಚಿಕಿತ್ಸಾ ಸೇವೆಗಳು
ನಮ್ಮ ಕೇಂದ್ರವು ದಂಪತಿಗಳಿಗೆ ಸಂತಾನಭಾಗ್ಯ ಕರುಣಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಬಳಸುತ್ತದೆ. ನಮ್ಮಲ್ಲಿ ಫರ್ಟಿಲಿಟಿ ಚಿಕಿತ್ಸೆಗಳು, ರೋಗನಿರ್ಣಯ ಮತ್ತು ಬಂಜೆತನದ ಸಮಸ್ಯೆಗಳು ಲಭ್ಯವಿರುವ ಪ್ರಮುಖ ಸೇವೆಗಳ ಪಟ್ಟಿ ಇಲ್ಲಿದೆ:
ಐವಿಎಫ್ (IVF)
ಎಂದರೆ ಪ್ರಯೋಗಾಲಯದಲ್ಲಿ ನಡೆಯುವ ಫಲೀಕರಣ ಪ್ರಕ್ರಿಯೆ. ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುವನ್ನು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಸಂಯೋಜಿಸಿ ಭ್ರೂಣವನ್ನು ಸೃಷ್ಟಿಸಲಾಗುತ್ತದೆ. ನಂತರ, ಆರೋಗ್ಯಕರವಾಗಿ ಬೆಳೆದ ಆ ಭ್ರೂಣವನ್ನು ಮಹಿಳೆಯ ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ.
ಐಯುಐ (IUI)
ಇದು ನೈಸರ್ಗಿಕ ಫಲೀಕರಣಕ್ಕೆ ಸಹಾಯ ಮಾಡುತ್ತದೆ. ಅಂಡೋತ್ಪತ್ತಿಯ ಸಮಯದಲ್ಲಿ ವೀರ್ಯಾಣುವನ್ನು ನೇರವಾಗಿ ಗರ್ಭಕೋಶಕ್ಕೆ ಸೇರಿಸುವ ಸರಳ ಚಿಕಿತ್ಸೆ.
ಐಸಿಎಸ್ಐ (ICSI)
ಪುರುಷ ಬಂಜೆತನದ ರಚನಾತ್ಮಕ ವ್ಯತ್ಯಾಸಗಳು, ಅಂತಃಸ್ರಾವಕ ಬದಲಾವಣೆಗಳು ಅಥವಾ ಜೀವನಶೈಲಿಯ ಪರಿಣಾಮಗಳಿಂದ ಉಂಟಾಗುವ ಪುರುಷ ಸಂತಾನೋತ್ಪತ್ತಿ ತೊಂದರೆಗಳನ್ನು ಪರಿಹರಿಸಲು ಅಂಡಾಣುವಿನೊಳಗೆ ನೇರವಾಗಿ ವೀರ್ಯಾಣುವನ್ನು ಇಂಜೆಕ್ಟ್ ಮಾಡುವ ವಿಧಾನ.
ಎಗ್ ಫ್ರೀಜಿಂಗ್
ಭವಿಷ್ಯದಲ್ಲಿ ಗರ್ಭಧರಿಸಲು ನಿಮ್ಮ ಅಂಡಾಣುಗಳನ್ನು ಕ್ಷಿತವಾಗಿ ಸಂರಕ್ಷಿಸುವ ತಂತ್ರಜ್ಞಾನ.
ಸಂಕೀರ್ಣ ಚಿಕಿತ್ಸೆಗಳು
ಫ್ರೋಜನ್ ಎಂಬ್ರಿಯೋ ಟ್ರಾನ್ಸ್ಫರ್, ಸರ್ಜಿಕಲ್ ಸ್ಪರ್ಮ್ ರಿಟ್ರೈವಲ್ ಮತ್ತು ದಾನಿ ಕಾರ್ಯಕ್ರಮಗಳು.
ಸ್ತ್ರೀ ಬಂಜೆತನ
ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗದಿರುವುದು, ಫಾಲೋಪಿಯನ್ ಟ್ಯೂಬ್ಗಳ ಸಮಸ್ಯೆ ಅಥವಾ ಗರ್ಭಕೋಶದ ರಚನೆಯಲ್ಲಿನ ದೋಷಗಳಿಂದಾಗಿ ಗರ್ಭಧರಿಸಲು ಸಾಧ್ಯವಾಗದಿರುವ ಸ್ಥಿತಿ.
ಪುರುಷ ಬಂಜೆತನ
ಪುರುಷರ ಸಂತಾನೋತ್ಪತ್ತಿ ಆರೋಗ್ಯವನ್ನು ತಿಳಿಯಲು, ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟ, ಚಲನಶೀಲತೆ ಅಥವಾ ಪ್ರಮಾಣ ಕಡಿಮೆ ಇರುವುದರಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪತ್ತೆಹಚ್ಚಲಾಗುವುದು.
ಪದೇ ಪದೇ ಗರ್ಭಪಾತ
ಮಹಿಳೆಯರಿಗೆ ಸತತವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗರ್ಭಪಾತವಾಗುವುದು. ಇದಕ್ಕೆ ಅನೇಕ ಕಾರಣಗಳಿರಬಹುದು; ನಮ್ಮಲ್ಲಿ ಸೂಕ್ತ ತಪಾಸಣೆಯ ಮೂಲಕ ಇದರ ಮೂಲ ಕಾರಣವನ್ನು ಪತ್ತೆಹಚ್ಚಿ ಪರಿಹಾರಿಕ ಚಿಕಿತ್ಸೆ ನೀಡುತ್ತೇವೆ.
ಫಾಲೋಪಿಯನ್ ಟ್ಯೂಬ್ಗಳ ಅಡೆತಡೆ
ದಂಪತಿಗಳಲ್ಲಿ ಅಂಡಾಣು ಮತ್ತು ವೀರ್ಯಾಣು ಭೇಟಿಯಾಗುವ ಮಾರ್ಗದಲ್ಲಿ (ಫಾಲೋಪಿಯನ್ ಟ್ಯೂಬ್) ಅಡೆತಡೆ ಉಂಟಾಗುವುದು. ಇದರಿಂದ ನೈಸರ್ಗಿಕವಾಗಿ ಗರ್ಭಧರಿಸುವುದು ಕಷ್ಟವಾಗುತ್ತದೆ.
ಆಂಟಿ-ಮುಲೇರಿಯನ್ ಹಾರ್ಮೋನ್ (AMH) ಕೊರತೆ
ಮಹಿಳೆಯ ಅಂಡಾಶಯದ ಮೀಸಲು ಪ್ರಮಾಣವನ್ನು ಅಳೆಯಲು ಮತ್ತು ಪ್ರಮಾಣ ಕಡಿಮೆಯಾಗುವುದನ್ನು ಇದು ಸೂಚಿಸುತ್ತದೆ. ನಮ್ಮ ವೈದ್ಯಕೀಯ ಸಮಿತಿಯು ಬಳಸುವ ನಿಖರವಾದ ಆಂಟಿ-ಮುಲೇರಿಯನ್ ಹಾರ್ಮೋನ್ ಪರೀಕ್ಷೆ.
ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (PCOS)
ಮಹಿಳೆಯ ಹಾರ್ಮೋನುಗಳ ಅಸಮತೋಲನದಿಂದ ಅಂಡಾಶಯದಲ್ಲಿ ಸಣ್ಣ ಸಿಸ್ಟ್ಗಳು ಉಂಟಾಗಿ, ಅಂಡೋತ್ಪತ್ತಿ ಸರಿಯಾಗಿ ನಡೆಯದಿರುವುದು. ಇದು ಬಂಜೆತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಎಂಡೊಮೆಟ್ರಿಯೊಸಿಸ್
ಗರ್ಭಕೋಶದ ಒಳಪದರದ ಅಂಗಾಂಶಗಳು ಗರ್ಭಕೋಶದ ಹೊರಭಾಗದಲ್ಲಿ ಬೆಳೆಯುವ ಸ್ಥಿತಿ. ಇದು ತೀವ್ರ ನೋವು ಮತ್ತು ಬಂಜೆತನಕ್ಕೆ ಕಾರಣವಾಗಬಹುದು.
ಗರ್ಭಕೋಶದ ಫೈಬ್ರಾಯ್ಡ್ಗಳು
ಗರ್ಭಕೋಶದ ಗೋಡೆಗಳಲ್ಲಿ ಉಂಟಾಗುವ ಕ್ಯಾನ್ಸರ್ ರಹಿತ ಗಡ್ಡೆಗಳು. ಇವು ಗರ್ಭಧಾರಣೆಗೆ ಮತ್ತು ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗಬಹುದು.
ಅಂಡಾಶಯದ ಸಿಸ್ಟ್ಗಳು
ಅಂಡಾಶಯದಲ್ಲಿ ದ್ರವ ತುಂಬಿದ ಸಣ್ಣ ಚೀಲಗಳು ಅಥವಾ ಗಡ್ಡೆಗಳಾಗುವುದು. ಇವು ಅಂಡೋತ್ಪತ್ತಿ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರಬಹುದು.
ಹಾರ್ಮೋನ್ ಅಸಮತೋಲನ
ಸಂತಾನೋತ್ಪತ್ತಿಗೆ ಅಗತ್ಯವಾದ ಪ್ರೊಜೆಸ್ಟರಾನ್, ಈಸ್ಟ್ರೊಜೆನ್, ಥೈರಾ ಅಥವಾ ಪ್ರೊಲ್ಯಾಕ್ಟಿನ್ ಹಾರ್ಮೋನುಗಳಲ್ಲಿ ಏರುಪೇರಾಗುವುದು, ಇದು ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಕೋಲಾರದಲ್ಲಿರುವ ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರಕ್ಕೆ ಭೇಟಿ ನೀಡಿ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ನಿಮ್ಮ ಪೋಷಕತ್ವದ ಕನಸನ್ನು ಸಾಕಾರಗೊಳಿಸಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ. ನಮ್ಮ ಕೇಂದ್ರವು ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿದೆ.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ವಿಳಾಸ ಮತ್ತು ಸಂಪರ್ಕ ಮಾಹಿತಿ
2ನೇ ಮಹಡಿ, 234/237 ದೀಪಾ ಕಾಂಪ್ಲೆಕ್ಸ್, ಗೌರಿಪೇಟೆ ಬಂಗಾರಪೇಟೆ, ಮುಖ್ಯ ರಸ್ತೆ, ಕೋಲಾರ, ಕರ್ನಾಟಕ – 563101 ದೂರವಾಣಿ ಸಂಖ್ಯೆ – +91 8951910584 ವಾಟ್ಸಾಪ್ ಸಂಖ್ಯೆ – 919289129485 ಕಾರ್ಯಾಚರಣೆಯ ಸಮಯ – ಸೋಮ–ಶನಿ: ಬೆಳಿಗ್ಗೆ 9:00 – ಸಂಜೆ 6:00 (ಭಾನುವಾರ ಮುಚ್ಚಲಾಗಿದೆ)
ನಾವು ಸೇವೆ ಸಲ್ಲಿಸುತ್ತಿರುವ ಹತ್ತಿರದ ಪ್ರದೇಶಗಳು
ಕೋಲಾರದ ಜೊತೆಗೆ, ಬಂಗಾರಪೇಟೆ, ಆಂಡರ್ಸನ್ಪೇಟ್ ಮತ್ತು ಹರಗದ್ದೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ರೋಗಿಗಳಿಗೂ ನಾವು ಉತ್ತಮ ಫರ್ಟಿಲಿಟಿ ಚಿಕಿತ್ಸೆಯನ್ನು ನೀಡುತ್ತೇವೆ.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದ ಸೌಲಭ್ಯಗಳು ಮತ್ತು ಚಿಕಿತ್ಸೆಗಾಗಿ ಸೌಕರ್ಯಗಳು
ನಮ್ಮ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರದಲ್ಲಿ ನಿಮಗೆ ಉತ್ತಮ ಅನುಭವ ನೀಡಲು ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ:
- ಅತ್ಯಾಧುನಿಕ ಲ್ಯಾಬ್: ಅಂತರಾಷ್ಟ್ರೀಯ ಗುಣಮಟ್ಟದ ಐವಿಎಫ್ ಮತ್ತು ಎಂಬ್ರಿಯಾಲಜಿ ಪ್ರಯೋಗಾಲಯ
- ಸ್ವಚ್ಛ ಮತ್ತು ಆಧುನಿಕ ಒಟಿ: ಸಂಪೂರ್ಣ ಕ್ರಿಮಿನಾಶಕಗೊಳಿಸಲಾದ ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು
- ವಿಶ್ರಾಂತಿ ಕೊಠಡಿಗಳು: ಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯಲು ಸುಸಜ್ಜಿತ ಕೊಠಡಿಗಳು
- ಕೌನ್ಸೆಲಿಂಗ್ ಸೇವೆ: ಚಿಕಿತ್ಸೆಯ ಹಂತಗಳಲ್ಲಿ ಧೈರ್ಯ ಮತ್ತು ಮಾರ್ಗದರ್ಶನ ನೀಡಲು ಪರಿಣಿತ ಕೌನ್ಸಿಲರ್ಗಳ ಸೇವೆ
ನಮ್ಮ ಕೋಲಾರ ಐವಿಎಫ್ ಕೇಂದ್ರವನ್ನು ತಲುಪುವುದು ಹೇಗೆ?
ಕೋಲಾರ ನಗರದ ಗೌರಿಪೇಟೆ ಬಂಗಾರಪೇಟೆ ಮೇನ್ ರೋಡ್‌ನಲ್ಲಿ ನೆಲೆಗೊಂಡಿರುವ ನಮ್ಮ ಕೇಂದ್ರವನ್ನು ಬಸ್ ಅಥವಾ ಖಾಸಗಿ ವಾಹನದ ಮೂಲಕ ಸುಲಭವಾಗಿ ತಲುಪಬಹುದು. ಬಂಗಾರಪೇಟೆ, ಆಂಡರ್ಸನ್ಪೇಟ್ ಮತ್ತು ಹರಗದ್ದೆಯಿಂದ ಬರುವ ರೋಗಿಗಳು ರಾಜ್ಯ ಹೆದ್ದಾರಿ ಮೂಲಕ ಅನಾಯಾಸವಾಗಿ ತಲುಪಬಹುದು.
ಗೂಗಲ್ ಮ್ಯಾಪ್ಸ್ ಬಳಸಿ ‘ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರ ಕೋಲಾರ’ ಎಂದು ಹುಡುಕಿದರೆ ನಿಮಗೆ ಸುಲಭವಾದ ದಾರಿ ದೊರೆಯುತ್ತದೆ.
ಕೋಲಾರದಲ್ಲಿ ನಿಮ್ಮ ಬಿರ್ಲಾ ಫರ್ಟಿಲಿಟಿ ಚಿಕಿತ್ಸೆಯ ಹಂತ-ಹಂತದ ಪ್ರಕ್ರಿಯೆ
ಆರಂಭಿಕ ಸಮಾಲೋಚನೆ
ನಿಮ್ಮ ಫರ್ಟಿಲಿಟಿ ಪಯಣದ ಮೊದಲ ಹಂತವೇ ಸಮಾಲೋಚನೆ. ನಮ್ಮ ಅನುಭವಿ ಫರ್ಟಿಲಿಟಿ ತಜ್ಞರು ನಿಮ್ಮ ಎಲ್ಲಾ ಅನುಮಾನಗಳನ್ನು ಪರಹರಿಸಿ ಮುಂದಿನ ಹಂತದ ಪರೀಕ್ಷೆಗಳ ಬಗ್ಗೆ ತಿಳಿಸಿಕೊಡುತ್ತಾರೆ.
ಫರ್ಟಿಲಿಟಿ ಮೌಲ್ಯಮಾಪನ
ನಿಮ್ಮ ಬಂಜೆತನದ ನಿಖರ ಕಾರಣವನ್ನು ಪತ್ತೆಹಚ್ಚಲು ನಾವು ಸಂಪೂರ್ಣ ಕಾರಣ ನಿರ್ಣಯವನ್ನು ಮಾಡುತ್ತೇವೆ. ಇದರಲ್ಲಿ ಮಹಿಳೆಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್, ಹಾರ್ಮೋನ್ ಪರೀಕ್ಷೆಗಳು ಮತ್ತು ಪುರುಷರಿಗೆ ವೀರ್ಯಾಣು ವಿಶ್ಲೇಷಣೆ ಒಳಗೊಂಡಿರುತ್ತದೆ.
ವೈಯಕ್ತಿಕ ಚಿಕಿತ್ಸಾ ಯೋಜನೆ
ಒಬ್ಬ ಚಿಕಿತ್ಸಾರ್ಥಿಯ ಆರೋಗ್ಯ ಪರಿಸ್ಥಿತಿಯು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಆದ್ದರಿಂದ, ನಾವು ನಿಮ್ಮ ವೈದ್ಯಕೀಯ ವರದಿಗಳಿಗೆ ಅನುಗುಣವಾಗಿ ಪ್ರತ್ಯೇಕವಾದ ‘ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು’ ರೂಪಿಸುತ್ತೇವೆ.
ಚಿಕಿತ್ಸಾ ಪ್ರಕ್ರಿಯೆಗಳು
ನಿಮ್ಮ ಚಿಕಿತ್ಸೆಗಾಗಿ ಸುಸಜ್ಜಿತ ಪ್ರಯೋಗಾಲಯದಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ IVF, IUI ಅಥವಾ ICSI ನಂತಹ ಅಗತ್ಯವಿರುವ ಚಿಕಿತ್ಸೆಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ.
ಗರ್ಭಧಾರಣೆಯ ಮೇಲ್ವಿಚಾರಣೆ ಮತ್ತು ನಿರಂತರ ಬೆಂಬಲ
ನಿಮ್ಮ ಚಿಕಿತ್ಸೆಯ ನಂತರ ಗರ್ಭಧಾರಣೆಯು ದೃಢಪಟ್ಟರೆ, ನಾವು ನಿಮ್ಮನ್ನು ಕೈಬಿಡುವುದಿಲ್ಲ. ಮೊದಲ ಕೆಲವು ತಿಂಗಳುಗಳವರೆಗೆ ಆರೋಗ್ಯ ತಪಾಸಣೆ, ಅಲ್ಟ್ರಾಸೌಂಡ್ ಸ್ಕ್ಯಾನ್ಗಳು ಮತ್ತು ಭಾವನಾತ್ಮಕ ಬೆಂಬಲವನ್ನು ನಾವು ಒದಗಿಸುತ್ತೇವೆ.
ಕೋಲಾರದಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯ ವೆಚ್ಚ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಯು ದಂಪತಿಗಳ ಆರೋಗ್ಯದ ಸ್ಥಿತಿ ಮತ್ತು ಅಗತ್ಯವಿರುವ ಚಿಕಿತ್ಸೆಯ ಪ್ರಕಾರದ ಮೇಲೆ ಅವಲಂಬಿತವಾಗಿರುತ್ತದೆ.
- ಐವಿಎಫ್ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 1,72,000 ರಿಂದ ಪ್ರಾರಂಭವಾಗುತ್ತದೆ
- ಐಸಿಎಸ್ಐ ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 78,000 ರಿಂದ ಪ್ರಾರಂಭವಾಗುತ್ತದೆ
- IUI ಚಿಕಿತ್ಸೆಯ ವೆಚ್ಚ – ಪ್ರತಿ ಅವಧಿಗೆ ರೂ 17,000 ರಿಂದ ಪ್ರಾರಂಭವಾಗುತ್ತದೆ
ಐವಿಎಫ್ ವೆಚ್ಚದ ಮೇಲೆ ಪ್ರಭಾವ ಬೀರುವ ಅಂಶಗಳು
- ಚಿಕಿತ್ಸೆಯ ಪ್ರಕಾರ: ಐವಿಎಫ್, ಐಯೂಐ ಅಥವಾ ಐಸಿಎಸ್ಐ ಯಾವುದು ಸೂಕ್ತ ಎಂಬುದರ ಮೇಲೆ ವೆಚ್ಚ ನಿರ್ಧಾರ
- ಔಷಧಿಗಳು ಮತ್ತು ಇಂಜೆಕ್ಷನ್ಗಳು: ಚಿಕಿತ್ಸೆಯ ಸಮಯದಲ್ಲಿ ಬಳಸುವ ಔಷಧಿಗಳ ಪ್ರಮಾಣ
- ಹೆಚ್ಚುವರಿ ಪರೀಕ್ಷೆಗಳು: ಜೆನೆಟಿಕ್ ಪರೀಕ್ಷೆಗಳು ಅಥವಾ ಹೆಚ್ಚುವರಿ ಸ್ಕ್ಯಾನ್ಗಳು
- ಚಿಕಿತ್ಸಾ ಅವಧಿಗಳ ಸಂಖ್ಯೆ: ಯಶಸ್ವಿ ಫಲಿತಾಂಶಕ್ಕಾಗಿ ಎಷ್ಟು ಅವಧಿಗಳು ಬೇಕಾಗುತ್ತವೆ
ನಮ್ಮಲ್ಲಿ ಲಭ್ಯವಿರುವ ಸುಲಭ EMI ಮತ್ತು ಪಾವತಿ ಆಯ್ಕೆಗಳು
- ನಮ್ಮ ಚಿಕಿತ್ಸಾಲಯದಲ್ಲಿ 0% ಬಡ್ಡಿ ದರದ EMI ಸೌಲಭ್ಯ ಲಭ್ಯವಿದೆ.
- ನೀವು ನಿಮ್ಮ ಶುಲ್ಕವನ್ನು ಮಾಸಿಕ ಕಂತುಗಳ ಮೂಲಕ ಸುಲಭವಾಗಿ ಪಾವತಿಸಬಹುದು.
- ನಮ್ಮಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆ ಇರುತ್ತದೆ.
ವಿಮೆ ಮತ್ತು ಆರ್ಥಿಕ ಮಾರ್ಗದರ್ಶನ
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ವಿಮೆಯ ವ್ಯಾಪ್ತಿಯನ್ನು ಪರಿಶೀಲಿಸಲು ಮತ್ತು ಹಣಕಾಸಿನ ಯೋಜನೆಗಳನ್ನು ರೂಪಿಸಲು, ನಮ್ಮ ಫೈನಾನ್ಷಿಯಲ್ ಕೌನ್ಸಿಲರ್ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ.
ಕೋಲಾರದಲ್ಲಿ ನಮ್ಮ ಸೇವೆ ಲಭ್ಯವಿರುವ ಪ್ರದೇಶಗಳು
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಕೇಂದ್ರವು ಕೋಲಾರದ ಜೊತೆಗೆ ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳಿಗೂ ತನ್ನ ಗುಣಮಟ್ಟದ ಚಿಕಿತ್ಸೆಯನ್ನು ವಿಸ್ತರಿಸಿದೆ:
- ಬಂಗಾರಪೇಟೆ
- ಆಂಡರ್ಸನ್ಪೇಟ್
- ಹರಗದ್ದೆ















































