ಬೆಂಗಳೂರಿನಲ್ಲಿ ಗರ್ಭಾಶಯದ ಫೈಬ್ರಾಯ್ಡ್‌ಗಳ ಚಿಕಿತ್ಸೆ
ನಿಮ್ಮ ಆರೋಗ್ಯ ಇತಿಹಾಸ, ಮುಟ್ಟಿನ ಚಕ್ರ, ಮುಂದಿನ ಯೋಜನೆಗಳ ಬಗ್ಗೆ ಅನುಭವಿ ವೈದ್ಯರೊಂದಿಗೆ ವಿವರವಾದ ಚರ್ಚೆ ನಡೆಯುತ್ತದೆ.
ಗರ್ಭಾಶಯದ ಗಡ್ಡೆ ಎಂದರೇನು?
ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು
ಸರಳವಾಗಿ ಹೇಳಬೇಕೆಂದರೆ, ಗರ್ಭಾಶಯದ ಗಡ್ಡೆಗಳು ಗರ್ಭಾಶಯದ ಸ್ನಾಯುವಿನ ಗೋಡೆಯಲ್ಲಿ ಬೆಳೆಯುವ ಗಂಟುಗಳು. ವೈದ್ಯಕೀಯ ಪರಿಭಾಷೆಯಲ್ಲಿ ಇವನ್ನು ಲೀಯೋಮಯೋಮಾ ಅಥವಾ ಮಯೋಮಾ ಎಂದು ಕರೆಯುತ್ತಾರೆ. ಇಲ್ಲಿ ಸಮಾಧಾನದ ಸಂಗತಿ ಎಂದರೆ, ಇವು ಬಹುಪಾಲು ಹಾನಿಕರವಲ್ಲದವು — ಕ್ಯಾನ್ಸರ್ ಆಗಿ ಬದಲಾಗುವುದು ಬಹಳ ವಿರಳ. ಹಾಗಾಗಿ ಗಡ್ಡೆ ಪತ್ತೆಯಾಯಿತು ಎಂಬ ಒಂದೇ ಕಾರಣಕ್ಕೆ ಆತಂಕಪಡುವ ಅಗತ್ಯವಿಲ್ಲ.
ಗಾತ್ರದ ಬಗ್ಗೆ ಹೇಳುವುದಾದರೆ ಇಲ್ಲಿ ದೊಡ್ಡ ವ್ಯತ್ಯಾಸವಿದೆ — ಸಾಸಿವೆ ಕಾಳಿನಷ್ಟು ಚಿಕ್ಕದಿಂದ ಹಿಡಿದು ಕಲ್ಲಂಗಡಿ ಹಣ್ಣಿನಷ್ಟು ದೊಡ್ಡದಾಗಿಯೂ ಇವು ಬೆಳೆಯಬಲ್ಲವು. ಕೆಲವರಲ್ಲಿ ಒಂದೇ ಗಡ್ಡೆ ಕಂಡುಬಂದರೆ, ಇನ್ನು ಕೆಲವರಲ್ಲಿ ಹಲವು ಗಡ್ಡೆಗಳು ಒಟ್ಟೊಟ್ಟಿಗೆ ಬೆಳೆಯುತ್ತವೆ. ಗಡ್ಡೆಗಳ ಸಂಖ್ಯೆ ಹೆಚ್ಚಿದಷ್ಟೂ ಗರ್ಭಾಶಯದ ಗಾತ್ರವೂ ದೊಡ್ಡದಾಗುತ್ತಾ ಹೋಗುತ್ತದೆ; ಇದನ್ನೇ ವೈದ್ಯರು ‘ಬಲ್ಕಿ ಯುಟರಸ್‘ ಎಂದು ಕರೆಯುವುದು.
ಇದು ಫಲವತ್ತತೆ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಗಡ್ಡೆ ಎಲ್ಲಿ ಬೆಳೆಯುತ್ತದೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಗರ್ಭಾಶಯದ ಒಳಪದರದ ಬಳಿ ಅಥವಾ ಗೋಡೆಯ ಒಳಗೆ ಬೆಳೆಯುವ ಗಡ್ಡೆ ಭ್ರೂಣ ಸರಿಯಾಗಿ ಅಂಟಿಕೊಳ್ಳಲು ಅಡ್ಡಿಪಡಿಸಬಹುದು, ಅಥವಾ ಆ ಭಾಗಕ್ಕೆ ರಕ್ತ ಸಂಚಾರವನ್ನೇ ಕುಂಠಿತಗೊಳಿಸಬಹುದು. ಇದರ ಪರಿಣಾಮವಾಗಿ ಗರ್ಭಧರಿಸುವುದು ಕಷ್ಟವಾಗಬಹುದು, ಪದೇಪದೇ ಗರ್ಭಪಾತ ಆಗಬಹುದು, ಅಥವಾ ಬಂಜೆತನದ ಸಮಸ್ಯೆಯೂ ಎದುರಾಗಬಹುದು. ಆದರೆ ಒಂದು ಮಾತು ನೆನಪಿಡಿ — ಪ್ರತಿಯೊಂದು ಗಡ್ಡೆಯೂ ಫಲವತ್ತತೆಗೆ ತೊಂದರೆ ತರುತ್ತದೆ ಎಂದೇನಿಲ್ಲ. ಗಾತ್ರ ಮತ್ತು ಸ್ಥಳ ಇಲ್ಲಿ ದೊಡ್ಡ ಪಾತ್ರ ವಹಿಸುತ್ತವೆ, ಹಾಗಾಗಿ ಇದನ್ನು ವೈದ್ಯರ ಮೂಲಕವೇ ಖಚಿತಪಡಿಸಿಕೊಳ್ಳುವುದು ಸೂಕ್ತ.
ಗರ್ಭಾಶಯದ ಗಡ್ಡೆಗಳ ಲಕ್ಷಣಗಳು
ಸಾಮಾನ್ಯ ಲಕ್ಷಣಗಳು
ಆಶ್ಚರ್ಯವೆಂದರೆ ಬಹಳಷ್ಟು ಮಹಿಳೆಯರಿಗೆ ತಮಗೆ ಗಡ್ಡೆ ಇರುವುದೇ ಗೊತ್ತಿರುವುದಿಲ್ಲ. ಗಡ್ಡೆಯ ಗಾತ್ರ, ಅದು ಇರುವ ಸ್ಥಳ ಆಧರಿಸಿ ಕೆಲವರಲ್ಲಿ ಮಾತ್ರ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇಂತಿವೆ:
- ಅಧಿಕ ಮುಟ್ಟಿನ ರಕ್ತಸ್ರಾವ, ಒಂದು ವಾರಕ್ಕಿಂತ ಹೆಚ್ಚು ದಿನ ಮುಟ್ಟು ಮುಂದುವರಿಯುವುದು
- ಮುಟ್ಟಿನ ಸಮಯದಲ್ಲಿ ತೀವ್ರ ನೋವು, ಸೆಳೆತ
- ಹೊಟ್ಟೆಯ ಕೆಳಭಾಗ ಭಾರವಾದಂತೆ ಅಥವಾ ಊದಿಕೊಂಡಂತೆ ಅನಿಸುವುದು
- ರಾತ್ರಿ ಸೇರಿದಂತೆ ಪದೇಪದೇ ಮೂತ್ರಕ್ಕೆ ಹೋಗಬೇಕೆನಿಸುವುದು
- ಮಲಬದ್ಧತೆ
- ಬೆನ್ನು ನೋವು, ಕಾಲುಗಳಿಗೆ ಹಬ್ಬುವ ನೋವು
- ದೈಹಿಕ ಸಂಬಂಧದ ವೇಳೆ ಅಸ್ವಸ್ಥತೆ
ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ — ಈ ಎಲ್ಲ ಲಕ್ಷಣಗಳೂ ಪ್ರತಿಯೊಬ್ಬರಲ್ಲೂ ಒಂದೇ ರೀತಿ ಇರಬೇಕೆಂದಿಲ್ಲ. ಕೆಲವರಿಗೆ ಒಂದೆರಡು ಲಕ್ಷಣ ಮಾತ್ರ ಕಾಣಿಸಿದರೆ, ಇನ್ನು ಕೆಲವರಿಗೆ ಬಹುತೇಕ ಎಲ್ಲವೂ ಒಟ್ಟಿಗೇ ಎದುರಾಗಬಹುದು.
ಯಾವಾಗ ಫಲವತ್ತತೆ ತಜ್ಞರನ್ನು ಸಂಪರ್ಕಿಸಬೇಕು?
ಶ್ರೋಣಿಯ ಪ್ರದೇಶದಲ್ಲಿ ದೀರ್ಘಕಾಲದಿಂದ ನೋವು ಕಾಡುತ್ತಿದೆಯೇ? ಮುಟ್ಟಿನ ಸಮಯದ ಅತಿಯಾದ ರಕ್ತಸ್ರಾವದಿಂದ ಸುಸ್ತು ಆಗುತ್ತಿದೆಯೇ? ಅಥವಾ ಮಗುವಿಗಾಗಿ ಪ್ರಯತ್ನಿಸುತ್ತಿದ್ದೂ ಗರ್ಭಧಾರಣೆ ವಿಳಂಬವಾಗುತ್ತಿದೆಯೇ? ಈ ಪೈಕಿ ಯಾವುದಾದರೂ ನಿಮಗೆ ಅನ್ವಯವಾಗುತ್ತಿದ್ದರೆ, ತಡ ಮಾಡದೆ ಸ್ತ್ರೀರೋಗ ಅಥವಾ ಫಲವತ್ತತೆ ತಜ್ಞರನ್ನು ಭೇಟಿಯಾಗಿ. ಎಷ್ಟು ಬೇಗ ಪತ್ತೆಯಾಗುತ್ತದೋ, ಚಿಕಿತ್ಸೆ ಅಷ್ಟೇ ಸುಲಭವಾಗುತ್ತದೆ.
ಗರ್ಭಾಶಯದ ಗಡ್ಡೆಗಳ ಕಾರಣಗಳು ಮತ್ತು ಅಪಾಯಕಾರಿ ಅಂಶಗಳು
ಸಾಮಾನ್ಯ ಕಾರಣಗಳು
ಗಡ್ಡೆಗಳು ನಿಖರವಾಗಿ ಏಕೆ ಬೆಳೆಯುತ್ತವೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರವಿಲ್ಲ. ಆದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಈ ಅಂಶಗಳು ಇದಕ್ಕೆ ಕಾರಣವಾಗಬಹುದು:
- ಹಾರ್ಮೋನುಗಳ ಅಸಮತೋಲನ — ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಿನ ವ್ಯತ್ಯಯ
- ಅಡೆನೊಮೈಯೋಸಿಸ್ — ಗರ್ಭಾಶಯದ ಒಳಪದರ ಸ್ನಾಯುವಿನ ಗೋಡೆಯೊಳಗೆ ಬೆಳೆಯುವ ಸ್ಥಿತಿ
- ಗರ್ಭಾಶಯದ ಪಾಲಿಪ್ಸ್ — ಒಳಭಾಗದಲ್ಲಿ ಬೆಳೆಯುವ ಸಣ್ಣ ಅಂಗಾಂಶದ ಬೆಳವಣಿಗೆ
ಅಪಾಯವನ್ನು ಹೆಚ್ಚಿಸುವ ಅಂಶಗಳು
ವಯಸ್ಸು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 30ರಿಂದ 50ರ ವಯೋಮಾನದವರಲ್ಲಿ ಹಾರ್ಮೋನುಗಳ ಏರಿಳಿತ ಸಹಜವಾಗಿಯೇ ಹೆಚ್ಚಿರುತ್ತದೆ, ಹಾಗಾಗಿ ಗಡ್ಡೆ ಬೆಳೆಯುವ ಸಾಧ್ಯತೆಯೂ ಈ ವಯಸ್ಸಿನಲ್ಲಿ ಜಾಸ್ತಿ. ಬೊಜ್ಜು ಅಥವಾ ಅಧಿಕ ದೇಹದ ತೂಕ ಕೂಡ ಒಂದು ಮುಖ್ಯ ಕಾರಣ — ಕೊಬ್ಬಿನ ಜೀವಕೋಶಗಳು ಹೆಚ್ಚುವರಿ ಈಸ್ಟ್ರೊಜೆನ್ ಉತ್ಪಾದಿಸುವುದರಿಂದ ಗಡ್ಡೆ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಇನ್ನೊಂದು ಅಂಶ ಎಂದರೆ ಕುಟುಂಬದ ಹಿನ್ನೆಲೆ — ತಾಯಿ ಅಥವಾ ಸಹೋದರಿಗೆ ಈ ಸಮಸ್ಯೆ ಇದ್ದಿದ್ದರೆ, ನಿಮಗೂ ಬರುವ ಸಾಧ್ಯತೆ ಸ್ವಲ್ಪ ಹೆಚ್ಚೇ ಎನ್ನಬಹುದು.
ಗರ್ಭಾಶಯದ ಗಡ್ಡೆಗಳ ರೋಗನಿರ್ಣಯ
ದೈಹಿಕ ಪರೀಕ್ಷೆ
ಮೊದಲಿಗೆ ವೈದ್ಯರು ನಿಮ್ಮ ಸಂಪೂರ್ಣ ಆರೋಗ್ಯ ಇತಿಹಾಸ ಕೇಳಿ ತಿಳಿದುಕೊಳ್ಳುತ್ತಾರೆ, ಜೊತೆಗೆ ಶ್ರೋಣಿಯ ಪ್ರದೇಶದಲ್ಲಿ ಗಡ್ಡೆ ಅಥವಾ ನೋವಿನ ಸೂಚನೆ ಇದೆಯೇ ಎಂದು ಸಾಮಾನ್ಯ ದೈಹಿಕ ಪರೀಕ್ಷೆ ನಡೆಸುತ್ತಾರೆ.
ರೋಗನಿರ್ಣಯ ಪರೀಕ್ಷೆಗಳು
ಗಡ್ಡೆಯ ಗಾತ್ರ, ಸ್ಥಳ, ಸಂಖ್ಯೆ ತಿಳಿಯಲು ಮೊದಲು ಮಾಡುವುದೇ ಅಲ್ಟ್ರಾಸೌಂಡ್ ಸ್ಕ್ಯಾನ್. ಪ್ರಕರಣ ಸ್ವಲ್ಪ ಸಂಕೀರ್ಣವಾಗಿದ್ದರೆ ಎಂಆರ್‌ಐ ಸ್ಕ್ಯಾನ್ ಮೂಲಕ ಇನ್ನಷ್ಟು ಆಳವಾದ ಚಿತ್ರಣ ಪಡೆಯಲಾಗುತ್ತದೆ. ಇನ್ನು ಕೆಲವೊಮ್ಮೆ ಹಿಸ್ಟರೊಸ್ಕೋಪಿ ಎಂಬ ವಿಧಾನದ ಮೂಲಕ, ಸಣ್ಣ ಕ್ಯಾಮೆರಾ ಬಳಸಿ ಗರ್ಭಾಶಯದ ಒಳಗಿನ ಗೋಡೆಗಳನ್ನೂ ನೇರವಾಗಿ ಪರಿಶೀಲಿಸಲಾಗುತ್ತದೆ.
ಫಲವತ್ತತೆ ಮೌಲ್ಯಮಾಪನ
ಮಗುವಿಗಾಗಿ ಪ್ರಯತ್ನಿಸುತ್ತಿರುವ ದಂಪತಿಗಳ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಗರ್ಭಾಶಯದ ಒಳಭಾಗ ಗರ್ಭಧಾರಣೆಗೆ ಪೂರಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಫಲವತ್ತತೆ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ.
ಬೆಂಗಳೂರಿನಲ್ಲಿ ಗರ್ಭಾಶಯದ ಗಡ್ಡೆಗಳ ಚಿಕಿತ್ಸೆ
ಬೆಂಗಳೂರಿನ ಬಿರ್ಲಾ ಫರ್ಟಿಲಿಟಿ ಅಂಡ್ ಐವಿಎಫ್ ಕೇಂದ್ರದಲ್ಲಿ ಪ್ರತಿ ರೋಗಿಗೂ ಒಂದೇ ಚಿಕಿತ್ಸೆ ಎಂಬ ನಿಯಮವಿಲ್ಲ. ವಯಸ್ಸು, ಲಕ್ಷಣಗಳ ತೀವ್ರತೆ, ಮುಂದೆ ಗರ್ಭಧರಿಸುವ ಬಯಕೆ — ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಚಿಕಿತ್ಸಾ ಯೋಜನೆ ರೂಪಿಸಲಾಗುತ್ತದೆ.
ಚಿಕಿತ್ಸಾ ಆಯ್ಕೆಗಳು
ಗಡ್ಡೆಯ ಗಾತ್ರ ಮತ್ತು ಸ್ಥಳಕ್ಕೆ ಅನುಗುಣವಾಗಿ ಔಷಧೋಪಚಾರದಿಂದ ಶಸ್ತ್ರಚಿಕಿತ್ಸೆಯವರೆಗೆ ಹಲವು ಆಯ್ಕೆಗಳಿವೆ.
ವೈದ್ಯಕೀಯ ನಿರ್ವಹಣೆ
ಗಡ್ಡೆ ಸಣ್ಣದಿದ್ದರೆ ಹಾರ್ಮೋನ್ ಚಿಕಿತ್ಸೆಯೇ ಸಾಕಾಗುವುದು ಬಹಳಷ್ಟು ಸಂದರ್ಭಗಳಲ್ಲಿ. ಗರ್ಭನಿರೋಧಕ ಮಾತ್ರೆ ಅಥವಾ ಹಾರ್ಮೋನ್ ಇಂಜೆಕ್ಷನ್ ಮೂಲಕ ರಕ್ತಸ್ರಾವ ನಿಯಂತ್ರಿಸಬಹುದು, ಗಡ್ಡೆಯ ಗಾತ್ರವನ್ನೂ ತಾತ್ಕಾಲಿಕವಾಗಿ ತಗ್ಗಿಸಬಹುದು. ಮುಟ್ಟಿನ ಸೆಳೆತ, ಶ್ರೋಣಿಯ ನೋವಿಗೆ ಸೂಕ್ತ ನೋವು ನಿವಾರಕಗಳನ್ನೂ ನೀಡಲಾಗುತ್ತದೆ.
ಕನಿಷ್ಠ ಆಕ್ರಮಣಕಾರಿ ವಿಧಾನಗಳು
ಔಷಧಿಗಳಿಂದ ಪ್ರಯೋಜನವಾಗದೇ ಇದ್ದಾಗ ಅಥವಾ ಗಡ್ಡೆ ದೊಡ್ಡದಿದ್ದಾಗ ಲ್ಯಾಪರೊಸ್ಕೋಪಿಕ್ ಮೈಯೋಮೆಕ್ಟಮಿಯ ಕಡೆಗೆ ಹೊರಳುತ್ತಾರೆ ವೈದ್ಯರು. ಇಲ್ಲಿ ಗರ್ಭಾಶಯವನ್ನು ಸಂಪೂರ್ಣ ಸುರಕ್ಷಿತವಾಗಿಟ್ಟುಕೊಂಡು, ಸಣ್ಣ ರಂಧ್ರದ ಮೂಲಕ ಗಡ್ಡೆಯನ್ನಷ್ಟೇ ತೆಗೆಯಲಾಗುತ್ತದೆ. ಗರ್ಭಾಶಯದ ಒಳಗೇ ಬೆಳೆದಿರುವ ಗಡ್ಡೆಗಳಿಗೆ ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಎಂಬ ಇನ್ನೊಂದು ಆಯ್ಕೆಯೂ ಇದೆ — ಇಲ್ಲಿ ಯಾವುದೇ ಬಾಹ್ಯ ಛೇದನದ ಅಗತ್ಯವಿಲ್ಲ.
ಸಹಾಯಕ ಸಂತಾನೋತ್ಪತ್ತಿ ಚಿಕಿತ್ಸೆಗಳು (IVF/IUI/ICSI)
ಶಸ್ತ್ರಚಿಕಿತ್ಸೆ ಅಥವಾ ಔಷಧೋಪಚಾರದ ನಂತರವೂ ಗರ್ಭಧರಿಸುವುದು ಕಷ್ಟವಾದರೆ ಚಿಂತೆ ಬೇಡ. ತಜ್ಞರ ಮೇಲ್ವಿಚಾರಣೆಯಲ್ಲಿ ಐವಿಎಫ್ ಅಥವಾ ಐಯುಐನಂತಹ ಮುಂದುವರಿದ ಫಲವತ್ತತೆ ಚಿಕಿತ್ಸೆಗಳ ಮೂಲಕ ತಾಯ್ತನದ ಕನಸನ್ನು ನನಸಾಗಿಸುವ ದಾರಿ ಇನ್ನೂ ತೆರೆದೇ ಇರುತ್ತದೆ.
ಮುಂಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯ ಪ್ರಯೋಜನಗಳು
ಸುಧಾರಿತ ಫಲವತ್ತತೆ ಫಲಿತಾಂಶಗಳು
ಸಮಸ್ಯೆಯನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆ ಪಡೆದಷ್ಟೂ ಗರ್ಭಾಶಯದ ಆರೋಗ್ಯ ಚೆನ್ನಾಗಿ ಉಳಿಯುತ್ತದೆ, ಸಹಜವಾಗಿ ಅಥವಾ ಐವಿಎಫ್ ಮೂಲಕ ಗರ್ಭಧರಿಸುವ ಸಾಧ್ಯತೆಯೂ ಹೆಚ್ಚುತ್ತದೆ.
ಉತ್ತಮ ದೀರ್ಘಕಾಲೀನ ಸಂತಾನೋತ್ಪತ್ತಿ ಆರೋಗ್ಯ
ಸಕಾಲಕ್ಕೆ ಪಡೆದ ಚಿಕಿತ್ಸೆ ಹಾರ್ಮೋನುಗಳ ಸಮತೋಲನ ಕಾಪಾಡುತ್ತದೆ, ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.
ತೊಡಕುಗಳ ಕಡಿಮೆ ಅಪಾಯ
ರಕ್ತಹೀನತೆ, ತೀವ್ರ ಶ್ರೋಣಿಯ ನೋವು, ಗರ್ಭಧಾರಣೆಯ ಸಂದರ್ಭದ ಅಪಾಯಗಳು — ಇವೆಲ್ಲವನ್ನೂ ಗಣನೀಯವಾಗಿ ತಗ್ಗಿಸಬಹುದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ.
ಚಿಕಿತ್ಸೆಗಾಗಿ ಬಿರ್ಲಾ ಫರ್ಟಿಲಿಟಿ & IVF ಅನ್ನು ಏಕೆ ಆಯ್ಕೆ ಮಾಡಬೇಕು? ಬೆಂಗಳೂರು
ನಿಮ್ಮ ಕುಟುಂಬವನ್ನು ಆರಂಭಿಸಲು ಸರಿಯಾದ ಫಲವತ್ತತೆ ಕ್ಲಿನಿಕ್ ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಬಿರ್ಲಾ ಫರ್ಟಿಲಿಟಿ & IVF ನಲ್ಲಿ, ವೈಯಕ್ತಿಕ ಆರೈಕೆ (Personalized Care) ಮತ್ತು ಅನುಭವಿ ತಜ್ಞರ ಮಾರ್ಗದರ್ಶನದೊಂದಿಗೆ ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮೊಂದಿಗೆ ಇರುತ್ತೇವೆ. ನಮ್ಮ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಅತ್ಯುತ್ತಮ ಯಶಸ್ಸಿನ ಪ್ರಮಾಣದ ಮೂಲಕ 2,30,000ಕ್ಕೂ ಹೆಚ್ಚು ರೋಗಿಗಳಿಗೆ ಪೋಷಕರಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡಿದ್ದೇವೆ.
ಗರ್ಭಾಶಯದ ಗಡ್ಡೆಗಳ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಬಿರ್ಲಾ ಫರ್ಟಿಲಿಟಿ ಆಯ್ಕೆ ಮಾಡಿಕೊಳ್ಳುವುದೇಕೆ?
ಅನುಭವಿ ಫಲವತ್ತತೆ ತಜ್ಞರು
ಸಂಕೀರ್ಣ ಪ್ರಕರಣಗಳನ್ನೂ ನಿಖರವಾಗಿ ನಿರ್ವಹಿಸುವ ನುರಿತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ತಂಡ ಇಲ್ಲಿದೆ.
ಸುಧಾರಿತ ರೋಗನಿರ್ಣಯ ತಂತ್ರಜ್ಞಾನ
ಹೈ-ಟೆಕ್ ಅಲ್ಟ್ರಾಸೌಂಡ್, ಇಮೇಜಿಂಗ್ ವ್ಯವಸ್ಥೆಗಳ ನೆರವಿನಿಂದ ಸಮಸ್ಯೆಯ ಮೂಲವನ್ನು ಸುಲಭವಾಗಿ, ನಿಖರವಾಗಿ ಪತ್ತೆಹಚ್ಚಲಾಗುತ್ತದೆ.
ಸಾಕ್ಷ್ಯಾಧಾರಿತ ಚಿಕಿತ್ಸಾ ಪ್ರೋಟೋಕಾಲ್‌ಗಳು
ಅಂತರರಾಷ್ಟ್ರೀಯ ಗುಣಮಟ್ಟದ ಮಾರ್ಗಸೂಚಿ ಅನುಸರಿಸಿಯೇ ಪ್ರತಿ ಚಿಕಿತ್ಸೆಯನ್ನೂ ನೀಡಲಾಗುತ್ತದೆ — ಸುರಕ್ಷತೆ, ವಿಶ್ವಾಸಾರ್ಹತೆ ಎರಡಕ್ಕೂ ಇಲ್ಲಿ ಆದ್ಯತೆ.
ಅತ್ಯಾಧುನಿಕ ಐವಿಎಫ್ ಪ್ರಯೋಗಾಲಯಗಳು
ವಿಶ್ವದರ್ಜೆಯ ಎಂಬ್ರಿಯಾಲಜಿ ಲ್ಯಾಬ್‌ಗಳಿರುವುದರಿಂದ ಫಲವತ್ತತೆ ಚಿಕಿತ್ಸೆಯಲ್ಲಿ ಯಶಸ್ಸಿನ ಪ್ರಮಾಣವೂ ಉತ್ತಮವಾಗಿದೆ.
ವೈಯಕ್ತಿಕಗೊಳಿಸಿದ ಫಲವತ್ತತೆ ಆರೈಕೆ
ಪ್ರತಿ ರೋಗಿಯ ದೈಹಿಕ ಸ್ಥಿತಿ, ವೈಯಕ್ತಿಕ ಗುರಿಗೆ ತಕ್ಕಂತೆಯೇ ಚಿಕಿತ್ಸಾ ಯೋಜನೆ ರೂಪಿಸಲಾಗುತ್ತದೆ, ಒಬ್ಬರಿಗೊಬ್ಬರ ಪ್ರಕರಣ ಒಂದೇ ರೀತಿ ಇರುವುದಿಲ್ಲ ಎಂಬ ತಿಳುವಳಿಕೆಯೊಂದಿಗೆ.
ನಿಮ್ಮ ವೈದ್ಯಕೀಯ ಸಮಾಲೋಚನೆಗೆ ಸಿದ್ಧವಾಗುವುದು ಹೇಗೆ?
ನೀವು ತರಬೇಕಾದ ವೈದ್ಯಕೀಯ ದಾಖಲೆಗಳು
ಹಿಂದಿನ ಆರೋಗ್ಯ ತಪಾಸಣೆಯ ವಿವರಗಳು, ಪ್ರಸ್ತುತ ತೆಗೆದುಕೊಳ್ಳುತ್ತಿರುವ ಔಷಧಿಗಳ ಪಟ್ಟಿ — ಇವನ್ನು ಜೊತೆಗಿಟ್ಟುಕೊಂಡು ಹೋದರೆ ಸಮಾಲೋಚನೆ ಇನ್ನಷ್ಟು ಸುಗಮವಾಗುತ್ತದೆ.
ನಿಮಗೆ ಬೇಕಾಗಬಹುದಾದ ರೋಗನಿರ್ಣಯ ವರದಿಗಳು
ಇತ್ತೀಚಿನ ಶ್ರೋಣಿಯ ಅಲ್ಟ್ರಾಸೌಂಡ್ ವರದಿ, ಹಾರ್ಮೋನ್ ಮಟ್ಟದ ಪರೀಕ್ಷೆ ಸೇರಿದಂತೆ ರಕ್ತಪರೀಕ್ಷೆಯ ವರದಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಸಮಯ ಉಳಿಸುತ್ತದೆ.
ನಿಮ್ಮ ಫಲವತ್ತತೆ ತಜ್ಞರನ್ನು ಕೇಳಬೇಕಾದ ಪ್ರಶ್ನೆಗಳು
- ನನ್ನ ಗರ್ಭಾಶಯ ದೊಡ್ಡದಾಗಲು ನಿಖರವಾದ ಕಾರಣವೇನು?
- ಈ ಸ್ಥಿತಿ ನನ್ನ ಗರ್ಭಧರಿಸುವ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
- ನನಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಅಥವಾ ಔಷಧಿಗಳ ಮೂಲಕವೇ ಗುಣವಾಗಬಹುದೇ?
- ಚಿಕಿತ್ಸೆಯ ನಂತರ ಗರ್ಭಧರಿಸಲು ಎಷ್ಟು ಸಮಯ ಕಾಯಬೇಕು?
ಪದೇಪದೇ ಕೇಳಲಾಗುವ ಪ್ರಶ್ನೆಗಳು
ಗರ್ಭಾಶಯದ ಗಡ್ಡೆಗಳು ಕ್ಯಾನ್ಸರ್ ಆಗುತ್ತವೆಯೇ?
ಗರ್ಭಾಶಯದ ಗಡ್ಡೆಗಳಿದ್ದರೆ ನಾನು ಸಹಜವಾಗಿ ಗರ್ಭ ಧರಿಸಬಹುದೇ?
ಬೆಂಗಳೂರಿನಲ್ಲಿ ಈ ಚಿಕಿತ್ಸೆಗೆ ಎಷ್ಟು ಸಮಯ ಬೇಕಾಗುತ್ತದೆ?
ಶಸ್ತ್ರಚಿಕಿತ್ಸೆಯ ನಂತರ ಗರ್ಭಾಶಯವನ್ನು ಸುರಕ್ಷಿತವಾಗಿಡಬಹುದೇ?
ಗರ್ಭಾಶಯದ ಗಡ್ಡೆಗಳ ಆರಂಭಿಕ ಲಕ್ಷಣಗಳು ಯಾವುವು?
Top IVF Centers in Popular Cities
- IVF Center in Delhi
- IVF Center in New Town Kolkata
- IVF Center in Gurgaon
- IVF Center in Rewari
- IVF Center in Lucknow
- IVF Center in Varanasi
- IVF Center in Gorakhpur
- IVF Center in Noida
- IVF Center in Prayagraj
- IVF Center in Meerut
- IVF Center in Kolkata
- IVF Center in Howrah
- IVF Center in Bhubaneswar
- IVF Center in Cuttack
- IVF Center in Surat
- IVF Center in Ahmedabad
- IVF Center in Ranchi
- IVF Center in Chandigarh
- IVF Center in Guwahati
- IVF Center in Raipur
- IVF Center in Jaipur
- IVF Center in Nagpur
- IVF Center in Hyderabad
- IVF Center in Indore
- IVF Center in Bhopal
- IVF Center in Kozhikode
- IVF Center in Kannur
- IVF Center in Mangalore
- IVF Center in Palakkad
- IVF Center in Salem
- IVF Center in Thrissur
- IVF Center in Bangalore
- IVF Center in Kolar
- IVF Center in Mumbai
- IVF Center in Vijayapura
- IVF Center in Chennai
- IVF Center in Patna
- IVF Center in Perinthalmanna
- IVF Center in Siliguri
- IVF Center in Gachibowli