Trust img
Select City
Doctor Banner

*By clicking on the above button you agree to receive updates on WhatsApp

0 Results

ಬೆಂಗಳೂರಿನ ಅತ್ಯುತ್ತಮ ಐವಿಎಫ್ ತಜ್ಞರನ್ನು ಭೇಟಿಯಾಗಿ

ಕೋಲಾರದ ಪ್ರಖ್ಯಾತ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್. ಕೇಂದ್ರದಲ್ಲಿ, ನಮ್ಮ ವೈದ್ಯಕೀಯ ತಜ್ಞರು ಕ್ಲಿನಿಕಲ್ ಪರಿಣತಿಯೊಂದಿಗೆ ಅತ್ಯಂತ ಕರುಣಾಳು ಹಾಗೂ ಚಿಕಿತ್ಸಾರ್ಥಿ-ಕೇಂದ್ರಿತ ಆರೈಕೆಯನ್ನು ಒದಗಿಸುತ್ತಾರೆ. ನಮ್ಮಲ್ಲಿ ಲಭ್ಯವಿರುವ ವೈದ್ಯರು ಇವರಾಗಿದ್ದಾರೆ: 

ಡಾ. ನಾಗಜ್ಯೋತಿ ಎಸ್. 

  • ವೈದ್ಯಕೀಯ ಅರ್ಹತೆ: ಎಂಬಿಬಿಎಸ್, ಎಂಎಸ್ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ), ಫಲವಂತಿಕೆ ವೈದ್ಯಕೀಯ ಶಾಸ್ತ್ರದಲ್ಲಿ ಐ.ಸಿ.ಒ.ಜಿ. ಫೆಲೋಶಿಪ್ (ಎಫ್.ಆರ್.ಎಂ.).
  • ಅನುಭವದ ವರ್ಷಗಳು: 8 ಕ್ಕೂ ಹೆಚ್ಚು ವರ್ಷಗಳ ಆಳವಾದ ಕ್ಲಿನಿಕಲ್ ಪರಿಣತಿ.
  • ಪರಿಣತಿಯ ಪ್ರಮುಖ ಕ್ಷೇತ್ರಗಳು: ಐ.ವಿ.ಎಫ್., ಐ.ಸಿ.ಎಸ್.ಐ., ಐ.ಯು.ಐ., ಮತ್ತು ಹೈ ರಿಸ್ಕ್ ಪ್ರೆಗ್ನೆನ್ಸಿ ನಿರ್ವಹಣೆ.
  • ನೀಡಲಾಗುವ ಚಿಕಿತ್ಸೆಗಳು: ಐ.ವಿ.ಎಫ್., ಐ.ಸಿ.ಎಸ್.ಐ., ಐ.ಯು.ಐ., ಬಂಜೆತನ ನಿರ್ವಹಣೆ ಮತ್ತು ಸುಧಾರಿತ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳು.
  • ಚಿಕಿತ್ಸಾರ್ಥಿಗಳು ಇವರನ್ನೇಕೆ ಆಯ್ಕೆ ಮಾಡುತ್ತಾರೆ: 500 ಕ್ಕೂ ಹೆಚ್ಚು ಐ.ವಿ.ಎಫ್. ಸೈಕಲ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಇವರು, ಪ್ರತಿಯೊಬ್ಬ ಚಿಕಿತ್ಸಾರ್ಥಿಯ ಆರೋಗ್ಯ ಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ವೈಯಕ್ತಿಕ ಕಾಳಜಿ ಹಾಗೂ ಧೈರ್ಯ ತುಂಬುವುದರಿಂದ ರೋಗಿಗಳ ನೆಚ್ಚಿನ ವೈದ್ಯರಾಗಿದ್ದಾರೆ.

ಕೋಲಾರದಲ್ಲಿ ಐ.ವಿ.ಎಫ್. ಚಿಕಿತ್ಸೆಗಾಗಿ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್. ಕೇಂದ್ರವನ್ನು ಆರಿಸಿಕೊಳ್ಳುವುದೇಕೆ?

ಫಲವಂತಿಕೆ ಚಿಕಿತ್ಸೆಯನ್ನು ನೀಡುವಲ್ಲಿ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್. ಕೇಂದ್ರವು ಇಂದು ಅಗ್ರಸ್ಥಾನದಲ್ಲಿದೆ. ನಮ್ಮಲ್ಲಿ ಚಿಕಿತ್ಸೆ ಪಡೆಯುವುದು ನಿಮ್ಮ ಕುಟುಂಬದ ಕನಸಿಗೆ ಅತ್ಯುತ್ತಮ ಹೆಜ್ಜೆಯಾಗಲು ಪ್ರಮುಖ ಕಾರಣಗಳು ಇಲ್ಲಿವೆ:

  • ಅನುಭವಿ ಐ.ವಿ.ಎಫ್. ತಜ್ಞರು

ದೇಶದಲ್ಲೇ ಅತ್ಯಂತ ನುರಿತ, ಪ್ರಖ್ಯಾತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಯಶಸ್ವಿ ದಾಖಲೆ ಹೊಂದಿರುವ ಹಿರಿಯ ವೈದ್ಯರು ನಮ್ಮ ಕೇಂದ್ರದಲ್ಲಿ ಲಭ್ಯವಿದ್ದಾರೆ. ಪ್ರತಿ ದಂಪತಿಯ ವಿಶಿಷ್ಟ ಹಾಗೂ ಸಂಕೀರ್ಣ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ವೈಯಕ್ತಿಕ ಕಾಳಜಿಯ ಮೂಲಕ ಸಮಗ್ರ ಹಾಗೂ ನಿಖರವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮ ತಜ್ಞರ ತಂಡವು ಸದಾ ಮುಂದಿರುತ್ತದೆ.

  • ಅತ್ಯಾಧುನಿಕ ಐ.ವಿ.ಎಫ್. ಪ್ರಯೋಗಾಲಯ ಮತ್ತು ತಂತ್ರಜ್ಞಾನ

ಯಶಸ್ವಿ ಗರ್ಭಧಾರಣೆಗೆ ಪ್ರಯೋಗಾಲಯದ ಗುಣಮಟ್ಟ ಮತ್ತು ಅಲ್ಲಿ ಬಳಸುವ ತಂತ್ರಜ್ಞಾನವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಶ್ವದರ್ಜೆಯ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಅತ್ಯುನ್ನತ ತಂತ್ರಜ್ಞಾನದ ಸುಸಜ್ಜಿತ ಭ್ರೂಣಶಾಸ್ತ್ರ ಪ್ರಯೋಗಾಲಯವು ನಮ್ಮಲ್ಲಿದೆ. ಇದು ಭ್ರೂಣದ ಅತ್ಯುತ್ತಮ, ಆರೋಗ್ಯಕರ ಹಾಗೂ ಸಂಪೂರ್ಣ ಸುರಕ್ಷಿತ ಬೆಳವಣಿಗೆಗೆ ಅತ್ಯಂತ ಪೂರಕವಾದ ಮತ್ತು ಉತ್ತಮವಾದ ವಾತಾವರಣವನ್ನು ಒದಗಿಸುತ್ತದೆ.

  • ವೈಯಕ್ತಿಕ ಚಿಕಿತ್ಸಾ ಯೋಜನೆಗಳು

ಪ್ರತಿ ವ್ಯಕ್ತಿಯ ದೇಹದ ಜೈವಿಕ ಪ್ರಕೃತಿ, ವಯಸ್ಸು ಮತ್ತು ವೈದ್ಯಕೀಯ ಹಿನ್ನೆಲೆಯು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹೀಗಾಗಿ, ನಾವು ಎಲ್ಲರಿಗೂ ಒಂದೇ ರೀತಿಯ ಸಾಮಾನ್ಯ ಚಿಕಿತ್ಸೆಯನ್ನು ನೀಡದೆ, ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗೆ ತಕ್ಕಂತೆ ಪ್ರತ್ಯೇಕವಾದ ಮತ್ತು ನಿಖರವಾದ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುತ್ತೇವೆ.

  • ಪಾರದರ್ಶಕ ಬೆಲೆ ಮತ್ತು ರೋಗಿ-ಕೇಂದ್ರಿತ ಆರೈಕೆ

ಚಿಕಿತ್ಸೆಯ ಹಾದಿಯಲ್ಲಿ ಯಾವುದೇ ಗುಪ್ತ ಶುಲ್ಕಗಳು ಅಥವಾ ಅನಗತ್ಯ ವೆಚ್ಚಗಳಿಲ್ಲದೆ ಸಂಪೂರ್ಣ ಪಾರದರ್ಶಕ ಬಿಲ್ಲಿಂಗ್ ವ್ಯವಸ್ಥೆ ಮತ್ತು ಶೂನ್ಯ ಬಡ್ಡಿಯ ಇಎಂಐ (0% EMI) ಸೌಲಭ್ಯ ಜಾರಿಯಲ್ಲಿದೆ. ಇದರೊಂದಿಗೆ, ಚಿಕಿತ್ಸೆಯ ಪ್ರತಿ ಹಾದಿಯಲ್ಲಿ ಚಿಕಿತ್ಸಾರ್ಥಿಗಳಿಗೆ ತೀವ್ರವಾದ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲವನ್ನು ನೀಡುವುದು ನಮ್ಮ ಪ್ರಮುಖ ಬದ್ಧತೆಯಾಗಿದೆ.

ಕೋಲಾರದಲ್ಲಿ ನಮ್ಮ ತಜ್ಞರಿಂದ ನೀಡಲಾಗುವ ಪ್ರಮುಖ ಫಲವಂತಿಕೆ ಚಿಕಿತ್ಸೆಗಳು

ಕೋಲಾರದ ಪ್ರಖ್ಯಾತ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್. ಕೇಂದ್ರದಲ್ಲಿ, ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಬಳಸಿ ವಿವಿಧ ರೀತಿಯ ಸಮಗ್ರ ಫಲವಂತಿಕೆ ಚಿಕಿತ್ಸೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ:

  • ಐ.ವಿ.ಎಫ್. ಚಿಕಿತ್ಸೆ

ನೈಸರ್ಗಿಕವಾಗಿ ಮಕ್ಕಳಾಗದ ದಂಪತಿಗಳಿಗೆ ಇದು ಅತ್ಯಂತ ಪರಿಣಾಮಕಾರಿ ಮತ್ತು ಭರವಸೆಯ ಚಿಕಿತ್ಸೆಯಾಗಿದೆ. ಇದರಲ್ಲಿ ಮಹಿಳೆಯಿಂದ ಅಂಡಾಣುಗಳನ್ನು ಹಾಗೂ ಪುರುಷನಿಂದ ವೀರ್ಯಾಣುಗಳನ್ನು ಪಡೆದು, ನಮ್ಮ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಸಂಯೋಗ ಮಾಡಿಸಲಾಗುತ್ತದೆ. ಹೀಗೆ ತಯಾರಾದ ಆರೋಗ್ಯಕರ ಭ್ರೂಣವನ್ನು ನೇರವಾಗಿ ಗರ್ಭಕೋಶದಲ್ಲಿ ಮರುಸ್ಥಾಪಿಸಿ ಗರ್ಭಧಾರಣೆಗೆ ಅನುವು ಮಾಡಿಕೊಡಲಾಗುತ್ತದೆ.

 

  • ಐ.ಸಿ.ಎಸ್.ಐ ಚಿಕಿತ್ಸೆ

ಪುರುಷರಲ್ಲಿ ವೀರ್ಯದ ಗುಣಮಟ್ಟ, ಚಲನಶೀಲತೆ ಅಥವಾ ಸಂಖ್ಯೆ ತೀರಾ ಕಡಿಮೆ ಇರುವಂತಹ ಸಂದರ್ಭಗಳಲ್ಲಿ ಈ ಸುಧಾರಿತ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನದಲ್ಲಿ, ಅತ್ಯಂತ ನುರಿತ ತಜ್ಞರು ವಿಶೇಷ ಮೈಕ್ರೋಸ್ಕೋಪ್ ಮತ್ತು ಸೂಕ್ಷ್ಮ ಉಪಕರಣಗಳ ಸಹಾಯದಿಂದ ಅತ್ಯುತ್ತಮ ಗುಣಮಟ್ಟದ ಒಂದೇ ಒಂದು ಆರೋಗ್ಯಕರ ವೀರ್ಯಾಣುವನ್ನು ಆಯ್ಕೆ ಮಾಡಿ, ನೇರವಾಗಿ ಅಂಡಾಣುವಿನೊಳಗೆ ಚುಚ್ಚುತ್ತಾರೆ.

 

  • ಐ.ಯು.ಐ. ಚಿಕಿತ್ಸೆ

ಮಕ್ಕಳಾಗುವ ಪ್ರಯತ್ನದಲ್ಲಿರುವ ದಂಪತಿಗಳಿಗೆ ಇದು ಅತ್ಯಂತ ಸರಳ, ಸುರಕ್ಷಿತ ಹಾಗೂ ಆರಂಭಿಕ ಹಂತದ ಫಲವಂತಿಕೆ ಚಿಕಿತ್ಸೆಯಾಗಿದೆ. ಮಹಿಳೆಯ ಅಂಡೋತ್ಪತ್ತಿಯ ಸರಿಯಾದ ಸಮಯವನ್ನು ಗುರುತಿಸಿ, ಪ್ರಯೋಗಾಲಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಶುದ್ಧೀಕರಿಸಿ ಸಿದ್ಧಪಡಿಸಿದ ಆರೋಗ್ಯಕರ ವೀರ್ಯಾಣುಗಳನ್ನು ನೇರವಾಗಿ ಗರ್ಭಕೋಶದೊಳಗೆ ಸೇರಿಸಲಾಗುತ್ತದೆ.

  • ಸಂರಕ್ಷಣೆ ಮತ್ತು ಫರ್ಟಿಲಿಟಿ ಪ್ರಿಸರ್ವೇಷನ್ 

 

ವೃತ್ತಿಪರ ಗುರಿಗಳು ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ದಿನಗಳಲ್ಲಿ ಪೋಷಕರಾಗುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲು ಬಯಸುವ ಯುವತಿಯರು ಮತ್ತು ಯುವಕರಿಗೆ ಈ ಆಧುನಿಕ ತಂತ್ರಜ್ಞಾನವು ಒಂದು ವರದಿಯಾಗಿದೆ. ನಿಮ್ಮ ಯೌವನದ ದಿನಗಳಲ್ಲಿ ಅತ್ಯಂತ ಆರೋಗ್ಯಕರವಾಗಿರುವ ಅಂಡಾಣು ಅಥವಾ ವೀರ್ಯಾಣುಗಳನ್ನು ಸಂಗ್ರಹಿಸಿ, ಅತ್ಯಂತ ಕಡಿಮೆ ತಾಪಮಾನದಲ್ಲಿ ದೀರ್ಘಕಾಲದವರೆಗೆ ಸುರಕ್ಷಿತವಾಗಿ ಸಂರಕ್ಷಿಸಿಡಲಾಗುತ್ತದೆ.

 

  • ಫ್ರೋಜನ್ ಭ್ರೂಣ ಮರುಸ್ಥಾಪನೆ 

ಈ ವಿಧಾನದಲ್ಲಿ ಹಿಂದೆ ಸಂರಕ್ಷಿಸಿಡಲಾದ ಆರೋಗ್ಯಕರ ಭ್ರೂಣಗಳನ್ನು ಸೂಕ್ತ ಸಮಯದಲ್ಲಿ ತಾಯಿಯ ಗರ್ಭಕೋಶದಲ್ಲಿ ಮರುಸ್ಥಾಪಿಸಿ ಯಶಸ್ವಿ ಗರ್ಭಧಾರಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

 

  • ಮರುಕಳಿಸುವ ಐ.ವಿ.ಎಫ್. ವೈಫಲ್ಯ ನಿರ್ವಹಣೆ

ಹಿಂದಿನ ಪ್ರಯತ್ನಗಳಲ್ಲಿ ಐ.ವಿ.ಎಫ್. ಚಿಕಿತ್ಸೆಗಳು ಸತತವಾಗಿ ವಿಫಲಗೊಂಡಿದ್ದರೆ, ಅದರ ಮೂಲ ಕಾರಣಗಳನ್ನು ಕೂಲಂಕಷವಾಗಿ ಪತ್ತೆಹಚ್ಚಿ ವಿಶೇಷ ಪ್ರೋಟೋಕಾಲ್ ಹಾಗೂ ಸುಧಾರಿತ ತಂತ್ರಜ್ಞಾನಗಳ ಮೂಲಕ ಮುಂದಿನ ಬಾರಿಗೆ ಅತ್ಯುತ್ತಮ ಯಶಸ್ಸು ತಂದುಕೊಡುವ ವಿಶೇಷ ಚಿಕಿತ್ಸಾ ಕ್ರಮವಾಗಿದೆ.

 

ಕೋಲಾರದಲ್ಲಿ ನಮ್ಮ ತಜ್ಞರಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು

 

  • ಮಹಿಳಾ ಬಂಜೆತನ  

ಮಹಿಳೆಯರಲ್ಲಿ ಗರ್ಭಧಾರಣೆಗೆ ಅಡ್ಡಿಯಾಗುವ ಅಂಡೋತ್ಪತ್ತಿಯ ಸಮಸ್ಯೆಗಳು ಮತ್ತು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸಿ ತಾಯಿಯಾಗುವ ಕನಸಿಗೆ ಬೆಂಬಲ ನೀಡಲಾಗುತ್ತದೆ.

  • ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ 

ಇಂದಿನ ದಿನಗಳಲ್ಲಿ ಅನೇಕ ಯುವತಿಯರನ್ನು ಕಾಡುವ PCOS ಸಮಸ್ಯೆಯಿಂದ ಉಂಟಾಗುವ ತೂಕದ ವ್ಯತ್ಯಾಸ, ಮುಟ್ಟಿನ ಅನಿಯಮಿತತೆ ಹಾಗೂ ಅಂಡಾಣು ಬಿಡುಗಡೆಯ ತೊಂದರೆಗಳನ್ನು ಜೀವನಶೈಲಿ ಬದಲಾವಣೆ ಮತ್ತು ವಿಶೇಷ ವೈದ್ಯಕೀಯ ಚಿಕಿತ್ಸೆ ಮೂಲಕ ಸಂಪೂರ್ಣ ಹತೋಟಿಗೆ ತರಲಾಗುತ್ತದೆ.

  • ಎಂಡೊಮೆಟ್ರಿಯೋಸಿಸ್

ಗರ್ಭಕೋಶದ ಹೊರಭಾಗದಲ್ಲಿ ಅಂಗಾಂಶಗಳು ಬೆಳೆದು ತೀವ್ರ ನೋವು ಹಾಗೂ ಗರ್ಭಧಾರಣೆಗೆ ತಡೆಯೊಡ್ಡುವ ಈ ಸಂಕೀರ್ಣ ಸಮಸ್ಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿ, ಗರ್ಭಧಾರಣೆಗೆ ಅನುಕೂಲಕರವಾದ ವಾತಾವರಣ ನಿರ್ಮಿಸಲಾಗುತ್ತದೆ. 

  • ಕಡಿಮೆ AMH ಮಟ್ಟ  

ಅಂಡಾಣುಗಳ ಮೀಸಲು ಕಡಿಮೆ ಇರುವ ಮಹಿಳೆಯರಿಗಾಗಿ ವಿಶೇಷ ಪ್ರೋಟೋಕಾಲ್‌ಗಳನ್ನು ಬಳಸಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸಲಾಗುತ್ತದೆ.

  • ಬ್ಲಾಕ್ ಆಗಿರುವ ಫ್ಯಾಲೋಪಿಯನ್ ಟ್ಯೂಬ್‌ಗಳು  

ಅಂಡಾಣು ಮತ್ತು ವೀರ್ಯ ಸಂಯೋಗಕ್ಕೆ ಅಡ್ಡಿಯಾಗುವ ಟ್ಯೂಬ್‌ಗಳ ತಡೆಗಟ್ಟುವಿಕೆಯನ್ನು ಸುಧಾರಿತ ಚಿಕಿತ್ಸೆಗಳ ಮೂಲಕ ಪರಿಹರಿಸಲಾಗುತ್ತದೆ.

  • ಮರುಕಳಿಸುವ ಗರ್ಭಪಾತ  

ಸತತವಾಗಿ ಗರ್ಭಪಾತದ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗಳಿಗೆ, ಮೂಲ ಕಾರಣ ಪತ್ತೆಹಚ್ಚಿ ಸುರಕ್ಷಿತ ಗರ್ಭಧಾರಣೆಗೆ ವಿಶೇಷ ಕಾಳಜಿ ನೀಡಲಾಗುತ್ತದೆ.

  • ಅಸ್ಪಷ್ಟ ಬಂಜೆತನ  

ಎಲ್ಲಾ ವರದಿಗಳು ನಾರ್ಮಲ್ ಇದ್ದರೂ ಗರ್ಭಧಾರಣೆಯಾಗದ ಸಂದರ್ಭದಲ್ಲಿ, ದಂಪತಿಗಳಿಗೆ ವಿಶೇಷ ಮತ್ತು ನಿಖರವಾದ ಫಲವಂತಿಕೆ ಚಿಕಿತ್ಸೆ ನೀಡಲಾಗುತ್ತದೆ. 

Find the Right Fertility Solution for You!

Begin your Journey with Confidence.

close

*By clicking on the above button you agree to receive updates on WhatsApp

ಕೋಲಾರದಲ್ಲಿ ಐ.ವಿ.ಎಫ್. ಯಶಸ್ಸಿನ ಪ್ರಮಾಣ ಮತ್ತು ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು

ಐ.ವಿ.ಎಫ್. ಚಿಕಿತ್ಸೆಯನ್ನು ಪಡೆಯಲು ಆಲೋಚಿಸುವ ಪ್ರತಿಯೊಬ್ಬ ದಂಪತಿಗಳ ಮನಸ್ಸಿನಲ್ಲಿ ಬರುವ ಮೊದಲ ಪ್ರಶ್ನೆ ಎಂದರೆ “ಈ ಚಿಕಿತ್ಸೆ ಎಷ್ಟು ಯಶಸ್ವಿಯಾಗುತ್ತದೆ?” ಎಂಬುದು. ಕೋಲಾರದಲ್ಲಿ ಅತ್ಯುತ್ತಮ ಯಶಸ್ಸಿನ ದಾಖಲೆಯನ್ನು ಹೊಂದಿರುವ ನಮ್ಮ Best IVF Specialists in Kolar ತಂಡವು, ಪ್ರತಿ ದಂಪತಿಗೂ ಅತ್ಯುನ್ನತ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ. ಆದಾಗ್ಯೂ, ಐ.ವಿ.ಎಫ್. ಚಿಕಿತ್ಸೆಯ ಅಂತಿಮ ಫಲಿತಾಂಶವು ಕೆಲವು ನಿರ್ಣಾಯಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

  • ವಯಸ್ಸು ಮತ್ತು ಫಲವಂತಿಕೆ  

ಮಹಿಳೆಯರ ವಯಸ್ಸು ಐ.ವಿ.ಎಫ್. ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಸಾಮಾನ್ಯವಾಗಿ 30 ವರ್ಷದೊಳಗಿನವರಲ್ಲಿ ಉತ್ತಮ ಅಂಡಾಣು ಗುಣಮಟ್ಟದಿಂದ ಯಶಸ್ಸಿನ ಪ್ರಮಾಣ ಹೆಚ್ಚಿರುತ್ತದೆ ಮತ್ತು ವಯಸ್ಸು ಹೆಚ್ಚಿದಂತೆ ಗುಣಮಟ್ಟ ಕಡಿಮೆಯಾದರೂ ನಮ್ಮ ನುರಿತ ತಜ್ಞರು ಸುಧಾರಿತ ತಂತ್ರಜ್ಞಾನದೊಂದಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಾರೆ. 

  • ಅಂಡಾಣು ಮತ್ತು ವೀರ್ಯದ ಗುಣಮಟ್ಟ  

ಆರೋಗ್ಯಕರ ಭ್ರೂಣದ ಬೆಳವಣಿಗೆಗೆ ಅತ್ಯುತ್ತಮ ಗುಣಮಟ್ಟದ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಗವು ಅತ್ಯಂತ ಅವಶ್ಯಕವಾಗಿದೆ. ನಮ್ಮ ಅತ್ಯಾಧುನಿಕ ಭ್ರೂಣಶಾಸ್ತ್ರ ಪ್ರಯೋಗಾಲಯದಲ್ಲಿ ಇವುಗಳ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ, ಅತ್ಯಂತ ಉತ್ತಮವಾದವುಗಳನ್ನು ಮಾತ್ರ ಆಯ್ಕೆ ಮಾಡುವುದರಿಂದ ಗರ್ಭಧಾರಣೆಯ ಯಶಸ್ಸಿನ ಸಾಧ್ಯತೆ ಗಣನೀಯವಾಗಿ ಹೆಚ್ಚುತ್ತದೆ. 

  • ಜೀವನಶೈಲಿಯ ಅಂಶಗಳು 

ದೈನಂದಿನ ಆಹಾರ ಪದ್ಧತಿ, ಧೂಮಪಾನ ಅಥವಾ ಮದ್ಯಪಾನದಂತಹ ಅಭ್ಯಾಸಗಳು, ಅತಿಯಾದ ಮಾನಸಿಕ ಒತ್ತಡ ಮತ್ತು ನಿದ್ರೆಯಿಲ್ಲದಿರುವುದು ಫಲವಂತಿಕೆಯ ಮೇಲೆ ನೇರ ಪರಿಣಾಮ ಬೀರುತ್ತವೆ.

  • ಆರಂಭಿಕ ಫಲವಂತಿಕೆ ಸಮಾಲೋಚನೆಯ ಮಹತ್ವ 

ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ವೈದ್ಯರನ್ನು ಭೇಟಿ ಮಾಡುವುದು ಯಶಸ್ಸಿನ ಕೀಲಿಯಾಗಿದೆ. ವಿಳಂಬ ಮಾಡದೆ ಸರಿಯಾದ ಸಮಯದಲ್ಲಿ ತಜ್ಞರ ಮಾರ್ಗದರ್ಶನ ಪಡೆದರೆ, ಅನಗತ್ಯ ತೊಡಕುಗಳನ್ನುನಿರ್ಲಕ್ಷ ಮಾಡಿ ಪೋಷಕರಾಗುವ ನಿಮ್ಮ ಅಮೂಲ್ಯ ಕನಸನ್ನು ಅತ್ಯಂತ ಕಡಿಮೆ ಸಮಯದಲ್ಲಿ ನನಸು ಮಾಡಿಕೊಳ್ಳಬಹುದು. 

 

ನಮ್ಮ ಫಲವಂತಿಕೆ ಕೇಂದ್ರ – ಕೋಲಾರ

ಬೆಂಗಳೂರು ಹಾಗೂ ಕೋಲಾರ ಸುತ್ತಮುತ್ತಲಿನ ದಂಪತಿಗಳಿಗೆ ಭರವಸೆಯ ಬೆಳಕಾಗಿ ನಮ್ಮ ಅತ್ಯಾಧುನಿಕ ಬಿರ್ಲಾ ಫರ್ಟಿಲಿಟಿ ಮತ್ತು ಐ.ವಿ.ಎಫ್. ಕೇಂದ್ರವು ಸೇವೆ ಸಲ್ಲಿಸುತ್ತಿದೆ. ನಗರದ ಎಲ್ಲೆಡೆಯಿಂದಲೂ ಸುಲಭವಾಗಿ ತಲುಪಬಹುದಾದ ಪ್ರವೇಶಸಾಧ್ಯತೆಯೊಂದಿಗೆ ಈ ಕೇಂದ್ರವು ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ.

  • ವಿಳಾಸ: 2ನೇ ಮಹಡಿ, 234/237 ದೀಪಾ ಸಂಕೀರ್ಣ, ಗೌರಿಪೇಟೆ ಬಂಗಾರಪೇಟೆ ಮುಖ್ಯ ರಸ್ತೆ, ಕೋಲಾರ, ಕರ್ನಾಟಕ – 563101.

ನಮ್ಮ ಕೇಂದ್ರದಲ್ಲಿ ಅನುಭವಿ ಫಲವಂತಿಕೆ ತಜ್ಞರು ಹಾಗೂ ವಿಶ್ವದರ್ಜೆಯ ಅತ್ಯಾಧುನಿಕ ಐ.ವಿ.ಎಫ್. ಪ್ರಯೋಗಾಲಯದ ನೆರವಿನಿಂದ ಅಂಡಾಣು ಸಂರಕ್ಷಣೆ, ಐ.ವಿ.ಎಫ್, ಐ.ಸಿ.ಎಸ್.ಐ ಸೇರಿದಂತೆ ಸಮಗ್ರ ಫಲವಂತಿಕೆ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಿವೆ. ಚಿಕಿತ್ಸೆಯ ಹಾದಿಯಲ್ಲಿ ದಂಪತಿಗಳಿಗೆ ಮಾನಸಿಕ ನೆಮ್ಮದಿ ನೀಡುವ ರೋಗಿ ಸ್ನೇಹಿ ವಾತಾವರಣವನ್ನು ಇಲ್ಲಿ ಕಲ್ಪಿಸಲಾಗಿದೆ.

ಕೋಲಾರದ ಸುತ್ತಮುತ್ತ ನಾವು ಸೇವೆ ಸಲ್ಲಿಸುತ್ತಿರುವ ಪ್ರಮುಖ ಪ್ರದೇಶಗಳು

ಕೋಲಾರ ನಗರದ ಕೇಂದ್ರ ಭಾಗದಲ್ಲಿರುವ ನಮ್ಮ ಅತ್ಯಾಧುನಿಕ ಕೇಂದ್ರದ ಹೊರತಾಗಿ, ಸುತ್ತಮುತ್ತಲಿನ ಪ್ರದೇಶಗಳ ದಂಪತಿಗಳೂ ಸಹ ಅತ್ಯುತ್ತಮ ಫಲವಂತಿಕೆ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ನಾವು ನಮ್ಮ ಸೇವೆಯನ್ನು ವಿಸ್ತರಿಸಿದ್ದೇವೆ:

  • ಬಂಗಾರಪೇಟೆ
  • ಮುಳಬಾಗಿಲು 
  • ಶ್ರೀನಿವಾಸಪುರ 
  • ಮಾಲೂರು 
  • ಚಿಕ್ಕಬಳ್ಳಾಪುರ 
  • ರಾಬರ್ಟ್‌ಸನ್‌ಪೇಟೆ / ಕೆ.ಜಿ.ಎಫ್. 
  • ಚಿತ್ತೂರು, ಆಂಧ್ರಪ್ರದೇಶ

Honest & transparent IVF treatment cost in India

One clear price, explained before you begin — no surprise add-ons and no fine print at billing.

Know your treatment cost

See the lowest, average and highest cost for any treatment — add your details to reveal the figures.

₹6,00,000

Lowest cost

₹8,00,000

Average cost

₹12,00,000

Highest cost

Unlock your personalised cost

Get a detailed estimate and dedicated assistance from our care team.

+91

By continuing, you accept our Privacy Policy. The range shown is only an estimate and may differ after consultation.

Frequently Asked Questions

ಕೋಲಾರದಲ್ಲಿ ಅತ್ಯುತ್ತಮ ಐ.ವಿ.ಎಫ್. ತಜ್ಞರು ಯಾರು?

ಡಾ. ನಾಗಜ್ಯೋತಿ ಎಸ್. ರವರಂತಹ ಅತ್ಯಂತ ಅನುಭವಿ ಹಾಗೂ ನುರಿತ ತಜ್ಞರು ಕೋಲಾರದ ಬಿರ್ಲಾ ಫರ್ಟಿಲಿಟಿ ಅಂಡ್ ಐ.ವಿ.ಎಫ್. ಕೇಂದ್ರದಲ್ಲಿ ಲಭ್ಯವಿದ್ದಾರೆ.

ಕೋಲಾರದಲ್ಲಿ ಸರಿಯಾದ ಐ.ವಿ.ಎಫ್. ತಜ್ಞರನ್ನು ಹೇಗೆ ಆಯ್ಕೆ ಮಾಡುವುದು?

ವೈದ್ಯರ ವೃತ್ತಿಪರ ಅನುಭವ, ಅವರ ಯಶಸ್ಸಿನ ಪ್ರಮಾಣ, ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯಗಳು ಮತ್ತು ರೋಗಿಗಳ ಸಕಾರಾತ್ಮಕ ವಿಮರ್ಶೆಗಳನ್ನು ಗಮನಿಸಿ ಸರಿಯಾದ ತಜ್ಞರನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೋಲಾರದಲ್ಲಿ ಐ.ವಿ.ಎಫ್. ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಎಷ್ಟು?

ರೋಗಿಯ ವಯಸ್ಸು, ಆರೋಗ್ಯದ ಸ್ಥಿತಿಗತಿಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಆಧರಿಸಿ ಯಶಸ್ಸಿನ ಪ್ರಮಾಣವು ಅತ್ಯಂತ ಉತ್ತಮ ಮಟ್ಟದಲ್ಲಿದ್ದು, ಸಾವಿರಾರು ದಂಪತಿಗಳು ಇದರ ಪ್ರಯೋಜನ ಪಡೆದಿದ್ದಾರೆ.

ಕೋಲಾರದಲ್ಲಿ ಐ.ವಿ.ಎಫ್. ಚಿಕಿತ್ಸೆಗೆ ತಗಲುವ ವೆಚ್ಚ ಎಷ್ಟು?

ನೀವು ಪಡೆಯುವ ಚಿಕಿತ್ಸೆಯ ವಿಧ ಮತ್ತು ವೈಯಕ್ತಿಕ ಅಗತ್ಯತೆಗಳ ಮೇಲೆ ವೆಚ್ಚವು ಅವಲಂಬಿತವಾಗಿರುತ್ತದೆ. ಬಿರ್ಲಾ ಫರ್ಟಿಲಿಟಿ ಕೇಂದ್ರದಲ್ಲಿ ಸಂಪೂರ್ಣ ಪಾರದರ್ಶಕ ಬೆಲೆ ಮತ್ತು 0% ಇಎಂಐ ಸೌಲಭ್ಯ ಲಭ್ಯವಿದೆ.

ನಾನು ಯಾವಾಗ ಕಡ್ಡಾಯವಾಗಿ ಫಲವಂತಿಕೆ ತಜ್ಞರನ್ನು ಭೇಟಿ ಮಾಡಬೇಕು?

ಮದುವೆಯಾಗಿ 1 ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಗರ್ಭಧಾರಣೆಯಿಲ್ಲದೆ ಪ್ರಯತ್ನಿಸಿದರೂ ಫಲ ಸಿಗದಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.