Trust img
Select City
Doctor Banner

*By clicking on the above button you agree to receive updates on WhatsApp

1 Results

dr-snehadarshini-karanth

dr snehadarshini karanth

MBBS, MS (Obstetrics & Gynaecology), FRM

Rs. 500/- FREE

1st Appointment fees:

8+

Years of experience:

Koramangala, Karnataka

Clinic Location:

Monday - Saturday: 9:00 AM to 6:00 PM IST
Closed on Sunday

Timings:

ಬೆಂಗಳೂರಿನ ಅತ್ಯುತ್ತಮ ಐವಿಎಫ್ ತಜ್ಞರನ್ನು ಭೇಟಿಯಾಗಿ

ನಮ್ಮ ಬೆಂಗಳೂರು ಶಾಖೆಯಲ್ಲಿ ಇಬ್ಬರು ಅನುಭವಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ವಿಭಿನ್ನ ಪರಿಣತಿ ಹೊಂದಿದ್ದರೂ, ರೋಗಿ ಕೇಂದ್ರಿತ ಆರೈಕೆಯಲ್ಲಿ ಒಂದೇ ಗುರಿ ಹೊಂದಿದ್ದಾರೆ.

ಡಾ. ಮಂಜುನಾಥ್ ಸಿ.ಎಸ್.

ಎಂಬಿಬಿಎಸ್ ಮತ್ತು ಎಂಎಸ್ (ಪ್ರಸೂತಿ-ಸ್ತ್ರೀರೋಗ ಶಾಸ್ತ್ರ) ಪದವಿ ಪಡೆದಿರುವ ಡಾ. ಮಂಜುನಾಥ್, ಗೈನಕಾಲಜಿಕಲ್ ಎಂಡೋಸ್ಕೋಪಿ ಮತ್ತು ರಿಜೆನೆರೇಟಿವ್ ಮೆಡಿಸಿನ್‌ನಲ್ಲಿ ಲಂಡನ್‌ನಿಂದ ವಿಶೇಷ ಫೆಲೋಶಿಪ್ ಪೂರ್ಣಗೊಳಿಸಿದ್ದಾರೆ. 19 ವರ್ಷಕ್ಕೂ ಹೆಚ್ಚಿನ ವೃತ್ತಿ ಜೀವನದಲ್ಲಿ ಇವರು 20,000ಕ್ಕೂ ಅಧಿಕ ಐವಿಎಫ್ ಚಕ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಿಪ್ರೊಡಕ್ಟಿವ್ ಮೆಡಿಸಿನ್, ಮಿನಿಮಲ್ ಇನ್ವೇಸಿವ್ ಸರ್ಜರಿ ಮತ್ತು ಅಂಡೋತ್ಪತ್ತಿ ಉತ್ತೇಜನದಲ್ಲಿ ಇವರ ಪರಿಣತಿ ಎದ್ದುಕಾಣುತ್ತದೆ. ಸೌಮ್ಯ ಸ್ವಭಾವ ಮತ್ತು ವೈಜ್ಞಾನಿಕ ನಿಖರತೆಯಿಂದಾಗಿ ರೋಗಿಗಳು ಇವರನ್ನು ಹೆಚ್ಚು ನಂಬುತ್ತಾರೆ.

ಡಾ. ಸ್ನೇಹದರ್ಶಿನಿ ಕಾರಂತ

ಪ್ರಸೂತಿ-ಸ್ತ್ರೀರೋಗ ಶಾಸ್ತ್ರದಲ್ಲಿ ಎಂಎಸ್ ಪದವಿ ಹಾಗೂ ಫಲವಂತಿಕೆ ವೈದ್ಯಕೀಯ ಶಾಸ್ತ್ರದಲ್ಲಿ ಎಫ್‌ಆರ್‌ಎಂ ಫೆಲೋಶಿಪ್ ಪಡೆದಿರುವ ಡಾ. ಸ್ನೇಹದರ್ಶಿನಿ, 8 ವರ್ಷಗಳಿಂದ ಜಟಿಲ ಬಂಜೆತನ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐವಿಎಫ್, ಐಸಿಎಸ್‌ಐ, ಐಯುಐ ಜೊತೆಗೆ ಅಂಡಾಣು-ಭ್ರೂಣ ಸಂರಕ್ಷಣೆ ಮತ್ತು ಪುರುಷ ಬಂಜೆತನ ನಿರ್ವಹಣೆಯಲ್ಲೂ ಇವರು ಪರಿಣತರು. ಸವಾಲಿನ ಪ್ರಕರಣಗಳಲ್ಲಿಯೂ ಫಲಿತಾಂಶ ತರುವ ಸಾಮರ್ಥ್ಯ ಮತ್ತು ರೋಗಿಗಳಿಗೆ ತಾಯಿಯಂತೆ ಆಸರೆಯಾಗುವ ಗುಣದಿಂದ ಇವರು ಬಹುಬೇಗ ರೋಗಿಗಳ ವಿಶ್ವಾಸ ಗಳಿಸುತ್ತಾರೆ.

 

ಐವಿಎಫ್ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಬಿರ್ಲಾ ಫರ್ಟಿಲಿಟಿ & ಐವಿಎಫ್ ಅನ್ನೇ ಏಕೆ ಆಯ್ಕೆ ಮಾಡಬೇಕು?

ಸರಿಯಾದ ಕ್ಲಿನಿಕ್ ಆಯ್ಕೆ ಎಷ್ಟು ಮಹತ್ವದ್ದೆಂದರೆ, ಅದು ಚಿಕಿತ್ಸೆಯ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಬಿರ್ಲಾ ಫರ್ಟಿಲಿಟಿ & ಐವಿಎಫ್ ಈ ನಾಲ್ಕು ಅಂಶಗಳ ಮೂಲಕ ಬೇರೆಯಾಗಿ ನಿಲ್ಲುತ್ತದೆ.

ಅನುಭವಿ ತಜ್ಞರ ತಂಡ

ಅಂತರರಾಷ್ಟ್ರೀಯ ಮಟ್ಟದ ತರಬೇತಿ ಪಡೆದ ಹಿರಿಯ ವೈದ್ಯರ ತಂಡ ಪ್ರತಿ ಪ್ರಕರಣವನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಚಿಕಿತ್ಸೆ ರೂಪಿಸುತ್ತದೆ.

ಆಧುನಿಕ ಎಂಬ್ರಿಯಾಲಜಿ ಲ್ಯಾಬ್

ಜಾಗತಿಕ ಗುಣಮಟ್ಟದ ಉಪಕರಣಗಳು ಮತ್ತು ನುರಿತ ಎಂಬ್ರಿಯಾಲಜಿಸ್ಟ್‌ಗಳಿಂದ ಭ್ರೂಣದ ಸುರಕ್ಷಿತ ಬೆಳವಣಿಗೆಗೆ ಸೂಕ್ತ ವಾತಾವರಣ ಸಿಗುತ್ತದೆ.

ವೈಯಕ್ತಿಕಗೊಳಿಸಿದ ಚಿಕಿತ್ಸಾ ಯೋಜನೆ

ಪ್ರತಿ ದಂಪತಿಯ ವಯಸ್ಸು, ದೇಹ ಸ್ಥಿತಿ ಮತ್ತು ವೈದ್ಯಕೀಯ ಹಿನ್ನೆಲೆಗೆ ಅನುಗುಣವಾಗಿ ಪ್ರತ್ಯೇಕ ಚಿಕಿತ್ಸಾ ಪ್ರೋಟೋಕಾಲ್ ರೂಪಿಸಲಾಗುತ್ತದೆ.

ಪಾರದರ್ಶಕ ಶುಲ್ಕ ಮತ್ತು ನೈತಿಕತೆ

ಗುಪ್ತ ಶುಲ್ಕಗಳಿಲ್ಲದ ಸ್ಪಷ್ಟ ಬಿಲ್ಲಿಂಗ್ ಜೊತೆಗೆ, ಚಿಕಿತ್ಸೆಯುದ್ದಕ್ಕೂ ಭಾವನಾತ್ಮಕ ಬೆಂಬಲವನ್ನೂ ನೀಡಲಾಗುತ್ತದೆ.

ನಮ್ಮ ಬೆಂಗಳೂರಿನ ಐವಿಎಫ್ ತಜ್ಞರು ನೀಡುವ ಫಲವಂತಿಕೆ ಚಿಕಿತ್ಸೆಗಳು

ಪ್ರತಿ ದಂಪತಿಯ ಸಮಸ್ಯೆ ಬೇರೆಯದೇ ಆಗಿರುವುದರಿಂದ, ನಮ್ಮಲ್ಲಿ ವಿವಿಧ ರೀತಿಯ ಚಿಕಿತ್ಸಾ ಆಯ್ಕೆಗಳಿವೆ. ಕೆಳಗಿನ ಪಟ್ಟಿಯಲ್ಲಿ ಪ್ರಮುಖ ಚಿಕಿತ್ಸೆಗಳ ಸಂಕ್ಷಿಪ್ತ ವಿವರವಿದೆ.

ಐವಿಎಫ್ ಚಿಕಿತ್ಸೆ

ಪ್ರಯೋಗಾಲಯದಲ್ಲಿ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಗ ಮಾಡಿ ಸಿದ್ಧಪಡಿಸಿದ ಭ್ರೂಣವನ್ನು ಗರ್ಭಕೋಶಕ್ಕೆ ಮರುಸ್ಥಾಪಿಸುವ ಈ ವಿಧಾನ, ನೈಸರ್ಗಿಕವಾಗಿ ಗರ್ಭಧರಿಸಲಾಗದ ದಂಪತಿಗಳಿಗೆ ಅತ್ಯಂತ ಪರಿಣಾಮಕಾರಿ.

ಐಸಿಎಸ್‌ಐ

ವೀರ್ಯದ ಗುಣಮಟ್ಟ ಅಥವಾ ಸಂಖ್ಯೆ ಕಡಿಮೆ ಇರುವಾಗ, ಒಂದೇ ಆರೋಗ್ಯವಂತ ವೀರ್ಯಾಣುವನ್ನು ನೇರವಾಗಿ ಅಂಡಾಣುವಿಗೆ ಸೇರಿಸುವ ಈ ತಂತ್ರ ಫಲಪ್ರದವಾಗಿದೆ.

ಐಯುಐ

ಶುದ್ಧೀಕರಿಸಿದ ವೀರ್ಯಾಣುಗಳನ್ನು ನೇರವಾಗಿ ಗರ್ಭಕೋಶಕ್ಕೆ ಸೇರಿಸುವ ಈ ಸರಳ ವಿಧಾನ, ಆರಂಭಿಕ ಹಂತದ ಸಮಸ್ಯೆಗಳಿಗೆ ಕಡಿಮೆ ವೆಚ್ಚದ ಪರಿಹಾರವಾಗಿದೆ.

ಅಂಡಾಣು ಮತ್ತು ಫಲವಂತಿಕೆ ಸಂರಕ್ಷಣೆ

ವೃತ್ತಿ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಪೋಷಕರಾಗುವಿಕೆ ಮುಂದೂಡಲು ಬಯಸುವವರಿಗೆ, ಅಂಡಾಣು-ವೀರ್ಯಾಣುಗಳನ್ನು ದೀರ್ಘಕಾಲ ಸುರಕ್ಷಿತವಾಗಿ ಸಂಗ್ರಹಿಸಿಡುವ ಈ ಸೌಲಭ್ಯ ಲಭ್ಯವಿದೆ.

ಎಕ್ಟೋಪಿಕ್ ಪ್ರೆಗ್ನೆನ್ಸಿ ಚಿಕಿತ್ಸೆ

ಫ್ಯಾಲೋಪಿಯನ್ ಟ್ಯೂಬ್‌ನಲ್ಲಿ ತಪ್ಪಾಗಿ ಬೆಳೆಯುವ ಗರ್ಭವನ್ನು ಆರಂಭದಲ್ಲೇ ಗುರುತಿಸಿ, ಸುರಕ್ಷಿತ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ವಿಧಾನದಿಂದ ನಿರ್ವಹಿಸಲಾಗುತ್ತದೆ.

ಪಾಲಿಪ್ ಚಿಕಿತ್ಸೆ

ಗರ್ಭಧಾರಣೆಗೆ ಅಡ್ಡಿಯಾಗುವ ಗರ್ಭಕೋಶದ ಪಾಲಿಪ್‌ಗಳನ್ನು ಹಿಸ್ಟರೊಸ್ಕೋಪಿ ಮೂಲಕ ನೋವುರಹಿತವಾಗಿ ತೆಗೆಯಲಾಗುತ್ತದೆ.

ಮರುಕಳಿಸುವ ಐವಿಎಫ್ ವೈಫಲ್ಯ ನಿರ್ವಹಣೆ

ಹಿಂದಿನ ಪ್ರಯತ್ನಗಳು ವಿಫಲವಾಗಿದ್ದರೆ, ಮೂಲ ಕಾರಣ ಪತ್ತೆಹಚ್ಚಿ ವಿಶೇಷ ಪ್ರೋಟೋಕಾಲ್ ಮೂಲಕ ಮುಂದಿನ ಪ್ರಯತ್ನಕ್ಕೆ ಸಿದ್ಧಗೊಳಿಸಲಾಗುತ್ತದೆ.

 

ನಮ್ಮ ಬೆಂಗಳೂರಿನ ತಜ್ಞರು ಚಿಕಿತ್ಸೆ ನೀಡುವ ಆರೋಗ್ಯ ಸಮಸ್ಯೆಗಳು

ಬಂಜೆತನಕ್ಕೆ ಕಾರಣವಾಗುವ ಹಲವು ಸ್ಥಿತಿಗಳಿವೆ. ಈ ಕೆಳಗಿನ ಪಟ್ಟಿಯಲ್ಲಿ ನಾವು ಚಿಕಿತ್ಸೆ ನೀಡುವ ಪ್ರಮುಖ ಸಮಸ್ಯೆಗಳಿವೆ.

ಮಹಿಳಾ ಬಂಜೆತನ

ಅಂಡೋತ್ಪತ್ತಿ ಸಮಸ್ಯೆ, ಹಾರ್ಮೋನ್ ಅಸಮತೋಲನ ಮತ್ತು ಗರ್ಭಕೋಶದ ದೋಷಗಳನ್ನು ಪತ್ತೆಹಚ್ಚಿ ಸಮಗ್ರ ಚಿಕಿತ್ಸೆ ನೀಡಲಾಗುತ್ತದೆ.

ಪುರುಷ ಬಂಜೆತನ

ವೀರ್ಯದ ಗುಣಮಟ್ಟ, ಚಲನಶೀಲತೆ ಅಥವಾ ಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಧುನಿಕ ತಪಾಸಣೆಗಳ ಮೂಲಕ ಗುರುತಿಸಿ ಚಿಕಿತ್ಸೆ ನೀಡಲಾಗುತ್ತದೆ.

ಪಿಸಿಓಎಸ್

ತೂಕ ವ್ಯತ್ಯಾಸ, ಅನಿಯಮಿತ ಮುಟ್ಟು ಮತ್ತು ಅಂಡೋತ್ಪತ್ತಿ ತೊಂದರೆ ತರುವ ಈ ಸ್ಥಿತಿಯನ್ನು ಜೀವನಶೈಲಿ ಬದಲಾವಣೆ ಮತ್ತು ಔಷಧಿಗಳ ಮೂಲಕ ನಿಯಂತ್ರಿಸಲಾಗುತ್ತದೆ.

ಎಂಡೊಮೆಟ್ರಿಯೋಸಿಸ್

ಗರ್ಭಕೋಶದ ಹೊರಗೆ ಅಂಗಾಂಶ ಬೆಳೆದು ನೋವು ಮತ್ತು ಗರ್ಭಧಾರಣೆಗೆ ತಡೆಯೊಡ್ಡುವ ಈ ಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತದೆ.

ಕಡಿಮೆ ಎಎಂಎಚ್ ಮಟ್ಟ

ಅಂಡಾಣು ಮೀಸಲು ಕಡಿಮೆ ಇರುವವರಿಗೆ ವಿಶೇಷ ಪ್ರೋಟೋಕಾಲ್ ಬಳಸಿ ಗರ್ಭಧಾರಣೆ ಸಾಧ್ಯತೆ ಹೆಚ್ಚಿಸಲಾಗುತ್ತದೆ.

ದ್ವಿಶೃಂಗ ಗರ್ಭಕೋಶ

ಜನ್ಮಜಾತ ಆಕಾರ ವ್ಯತ್ಯಾಸವಿರುವ ಈ ಸ್ಥಿತಿಯನ್ನು ಸೂಕ್ತ ವೈದ್ಯಕೀಯ ಮಾರ್ಗದರ್ಶನದಿಂದ ನಿರ್ವಹಿಸಲಾಗುತ್ತದೆ.

ಬ್ಲಾಕ್ ಆದ ಫ್ಯಾಲೋಪಿಯನ್ ಟ್ಯೂಬ್‌ಗಳು

ಲ್ಯಾಪ್ರೊಸ್ಕೋಪಿ ಅಥವಾ ಐವಿಎಫ್ ಮೂಲಕ ಈ ಅಡಚಣೆಯನ್ನು ಪರಿಹರಿಸಲಾಗುತ್ತದೆ.

ಮರುಕಳಿಸುವ ಗರ್ಭಪಾತ

ಮೂಲ ಕಾರಣ ಪತ್ತೆಹಚ್ಚಿ, ಗರ್ಭಧಾರಣೆ ಸುರಕ್ಷಿತವಾಗಿ ಮುಂದುವರಿಯಲು ವಿಶೇಷ ಕಾಳಜಿ ನೀಡಲಾಗುತ್ತದೆ.

ಅಸ್ಪಷ್ಟ ಬಂಜೆತನ

ಎಲ್ಲಾ ವರದಿಗಳು ಸಹಜವಾಗಿದ್ದರೂ ಗರ್ಭಧಾರಣೆಯಾಗದ ಸಂದರ್ಭದಲ್ಲಿ ನಿಖರ ಫಲವಂತಿಕೆ ಚಿಕಿತ್ಸೆ ನೀಡಲಾಗುತ್ತದೆ.

Find the Right Fertility Solution for You!

Begin your Journey with Confidence.

close

*By clicking on the above button you agree to receive updates on WhatsApp

ಐವಿಎಫ್ ಯಶಸ್ಸಿನ ಪ್ರಮಾಣ ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳು

ಐವಿಎಫ್ ಚಿಕಿತ್ಸೆಯ ಯಶಸ್ಸು ಒಂದೇ ಅಂಶದ ಮೇಲೆ ಅವಲಂಬಿತವಲ್ಲ; ಬೆಂಗಳೂರಿನ ಐವಿಎಫ್ ತಜ್ಞರ ಪ್ರಕಾರ ಈ ನಾಲ್ಕು ಅಂಶಗಳು ನಿರ್ಣಾಯಕ.

ವಯಸ್ಸು ಮತ್ತು ಫಲವಂತಿಕೆ

30 ವರ್ಷದೊಳಗಿನವರಲ್ಲಿ ಅಂಡಾಣು ಗುಣಮಟ್ಟ ಉತ್ತಮವಿದ್ದು, ವಯಸ್ಸು ಹೆಚ್ಚಿದಂತೆ ಸುಧಾರಿತ ತಂತ್ರಜ್ಞಾನದ ಸಹಾಯ ಬೇಕಾಗುತ್ತದೆ.

ಅಂಡಾಣು ಮತ್ತು ವೀರ್ಯದ ಗುಣಮಟ್ಟ

ಆರೋಗ್ಯಕರ ಭ್ರೂಣ ಬೆಳವಣಿಗೆಗೆ ಇವೆರಡರ ಗುಣಮಟ್ಟ ಪ್ರಮುಖ ಪಾತ್ರ ವಹಿಸುತ್ತದೆ.

ಜೀವನಶೈಲಿಯ ಅಂಶಗಳು

ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ಒತ್ತಡ ಮತ್ತು ನಿದ್ರೆ ಕೊರತೆ ಫಲವಂತಿಕೆ ಮೇಲೆ ನೇರ ಪರಿಣಾಮ ಬೀರುತ್ತವೆ.

ಆರಂಭಿಕ ಸಮಾಲೋಚನೆಯ ಮಹತ್ವ

ಸಮಸ್ಯೆಯನ್ನು ಬೇಗ ಗುರುತಿಸಿ ತಜ್ಞರನ್ನು ಸಂಪರ್ಕಿಸಿದರೆ, ಪೋಷಕರಾಗುವ ಕನಸು ಬೇಗ ನನಸಾಗುತ್ತದೆ.

 

ಬೆಂಗಳೂರಿನ ನಮ್ಮ ಫಲವಂತಿಕೆ ಕೇಂದ್ರಗಳು

ನಗರದ ವಿವಿಧ ಭಾಗಗಳ ರೋಗಿಗಳಿಗೆ ಅನುಕೂಲವಾಗುವಂತೆ ನಾಲ್ಕು ಕೇಂದ್ರಗಳಲ್ಲಿ ಸೇವೆ ಲಭ್ಯವಿದೆ; ಪ್ರತಿ ಕೇಂದ್ರವೂ ಅತ್ಯಾಧುನಿಕ ಐವಿಎಫ್ ಲ್ಯಾಬ್ ಮತ್ತು ನುರಿತ ತಜ್ಞರನ್ನು ಹೊಂದಿದೆ.

ಕೋರಮಂಗಲ ಕೇಂದ್ರ

ದಕ್ಷಿಣ-ಪೂರ್ವ ಬೆಂಗಳೂರಿನ ಜನಪ್ರಿಯ ಪ್ರದೇಶದಲ್ಲಿದ್ದು, ಸುಲಭ ಸಂಚಾರ ಸಂಪರ್ಕ ಹೊಂದಿದೆ.

ಜೆ.ಪಿ. ನಗರ ಕೇಂದ್ರ

ಪ್ರಶಾಂತ ಪರಿಸರದಲ್ಲಿದ್ದು, ರೋಗಿಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ.

ಕಲ್ಯಾಣ ನಗರ ಕೇಂದ್ರ

ಉತ್ತರ-ಪೂರ್ವ ಬೆಂಗಳೂರಿನಲ್ಲಿದ್ದು, ರಿಂಗ್ ರಸ್ತೆಯಿಂದ ಸುಲಭ ಪ್ರವೇಶ ಸಾಧ್ಯ.

ಬಸವೇಶ್ವರ ನಗರ ಕೇಂದ್ರ

ಪಶ್ಚಿಮ ಬೆಂಗಳೂರಿನ ರೋಗಿಗಳಿಗೆ ಸಮೀಪವಾಗಿದ್ದು, ಎಲ್ಲಾ ಫಲವಂತಿಕೆ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯ.

ಬೆಂಗಳೂರಿನ ಸುತ್ತಮುತ್ತ ನಾವು ಸೇವೆ ಸಲ್ಲಿಸುತ್ತಿರುವ ಪ್ರಮುಖ ಪ್ರದೇಶಗಳು 

ಬೆಂಗಳೂರಿನ ಸುತ್ತಮುತ್ತಲಿನ ಸೇವೆ ಸಲ್ಲಿಸುತ್ತಿರುವ ಪ್ರಮುಖ ಪ್ರದೇಶಗಳ ವಿವರಗಳು ಇಲ್ಲಿವೆ: 

ರಾಮನಗರ 

ರೇಷ್ಮೆ ನಗರಿ ಎಂದೇ ಖ್ಯಾತಿ ಪಡೆದಿರುವ ರಾಮನಗರ ಹಾಗೂ ಅದರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ದಂಪತಿಗಳಿಗೆ ಬೆಂಗಳೂರಿಗೆ ಬಂದು ಸುಲಭವಾಗಿ ತಲುಪಲು ನಮ್ಮ ಕೇಂದ್ರಗಳು ಅತ್ಯಂತ ಹತ್ತಿರವಿವೆ. ಇಲ್ಲಿನ ಫಲವಂತಿಕೆ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅತ್ಯಂತ ನೈತಿಕ ಹಾಗೂ ಯಶಸ್ವಿ ಚಿಕಿತ್ಸಾ ವಿಧಾನಗಳ ಮೂಲಕ ಅನೇಕ ದಂಪತಿಗಳ ಪೋಷಕರಾಗುವ ಕನಸನ್ನು ನಾವು ನನಸು ಮಾಡಿದ್ದೇವೆ. 

ಚಿಕ್ಕಬಳ್ಳಾಪುರ 

ಉತ್ತರ ಭಾಗದಿಂದ ಬೆಂಗಳೂರಿಗೆ ಬರುವ ದಂಪತಿಗಳಿಗೆ ಚಿಕ್ಕಬಳ್ಳಾಪುರದಿಂದ ಸುಲಭವಾದ ಸಂಪರ್ಕವಿದೆ. ಹಾರ್ಮೋನುಗಳ ಅಸಮತೋಲನ, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಇತ್ಯಾದಿ ಬಂಜೆತನದ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಇಲ್ಲಿನ ವಿಶೇಷ ವೈದ್ಯಕೀಯ ಪ್ರೋಟೋಕಾಲ್‌ಗಳು ಮತ್ತು ವೈಯಕ್ತಿಕ ಕಾಳಜಿಯು ಅತ್ಯಂತ ಧನಾತ್ಮಕ ಫಲಿತಾಂಶಗಳನ್ನು ತಂದುಕೊಡುತ್ತಿವೆ. 

ಕೋಲಾರ

ಕೋಲಾರ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಅನೇಕ ದಂಪತಿಗಳಿಗೆ ಅತ್ಯುನ್ನತ ಗುಣಮಟ್ಟದ ಐ.ವಿ.ಎಫ್. ಹಾಗೂ ಫಲವಂತಿಕೆ ಚಿಕಿತ್ಸೆಗಳು ಈಗ ಕೈಗೆಟುಕುವಂತಿವೆ. ಯಾವುದೇ ಗುಪ್ತ ಶುಲ್ಕಗಳಿಲ್ಲದ ಪಾರದರ್ಶಕ ಬಿಲ್ಲಿಂಗ್ ಹಾಗೂ ಮಾನಸಿಕ ಬೆಂಬಲದೊಂದಿಗೆ ನಾವು ಕೋಲಾರದ ಜನರಿಗೆ ಭರವಸೆಯ ಬೆಳಕಾಗಿದ್ದೇವೆ. 

ತುಮಕೂರು

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತುಮಕೂರು ಭಾಗದಿಂದ ನಮ್ಮ ಬೆಂಗಳೂರಿನ ಕೇಂದ್ರಗಳಿಗೆ ಬರುವ ಚಿಕಿತ್ಸಾರ್ಥಿಗಳಿಗೆ ತ್ವರಿತ ಹಾಗೂ ಸುಲಭ ಪ್ರವೇಶಸಾಧ್ಯತೆ ಇದೆ. ತುಮಕೂರಿನ ಅನೇಕ ದಂಪತಿಗಳು ನಮ್ಮಲ್ಲಿ ಐ.ವಿ.ಎಫ್., ಐ.ಸಿ.ಎಸ್.ಐ ಹಾಗೂ ಇನ್ನಿತರ ಸುಧಾರಿತ ಚಿಕಿತ್ಸೆಗಳನ್ನು ಪಡೆದು ತಮ್ಮ ಮಾತೃತ್ವದ ಕನಸನ್ನು ಯಶಸ್ವಿಯಾಗಿ ಸಾಕಾರಗೊಳಿಸಿಕೊಂಡಿದ್ದಾರೆ. 

ಹೊಸೂರು 

ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಕೈಗಾರಿಕಾ ನಗರಿ ಹೊಸೂರಿನಿಂದ ನಮ್ಮ ಬೆಂಗಳೂರಿನ ಕೇಂದ್ರಗಳಿಗೆ ಬರುವ ವೃತ್ತಿಪರ ದಂಪತಿಗಳಿಗೆ ಅನುಕೂಲವಾಗುವಂತೆ ವಿಶೇಷ ಸಮಯಾವಕಾಶ ಹಾಗೂ ತ್ವರಿತ ಸಮಾಲೋಚನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಂಡಾಣು ಸಂರಕ್ಷಣೆ ಮತ್ತು ಆರಂಭಿಕ ಫಲವಂತಿಕೆ ತಪಾಸಣೆಗಾಗಿ ಇಲ್ಲಿಂದ ಹೆಚ್ಚಿನ ಸಂಖ್ಯೆಯ ದಂಪತಿಗಳು ನಮ್ಮ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. 

ಕನಕಪುರ

ಕನಕಪುರ ರಸ್ತೆ ಮೂಲಕ ಬೆಂಗಳೂರಿಗೆ ಸಂಪರ್ಕ ಸಾಧಿಸುವ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನಮ್ಮ ಚಿಕಿತ್ಸಾ ಕೇಂದ್ರಗಳು ಅತ್ಯಂತ ಹತ್ತಿರದಲ್ಲಿದ್ದು, ಯಾವುದೇ ಅಡಚಣೆಯಿಲ್ಲದೆ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಿರುತ್ತದೆ. ಪ್ರತಿಯೊಬ್ಬರ ಆರೋಗ್ಯ ಸ್ಥಿತಿಗೆ ತಕ್ಕಂತೆ ಪ್ರತ್ಯೇಕ ಚಿಕಿತ್ಸಾ ಯೋಜನೆಗಳನ್ನು ರೂಪಿಸಿ ಇಲ್ಲಿ ಯಶಸ್ಸು ತಂದುಕೊಡಲಾಗುತ್ತದೆ. 

ನೆಲಮಂಗಲ 

ಉತ್ತರ ಮತ್ತು ಪಶ್ಚಿಮ ಭಾಗದ ಪ್ರಮುಖ ಪ್ರವೇಶದ್ವಾರವಾಗಿರುವ ನೆಲಮಂಗಲದ ದಂಪತಿಗಳಿಗೆ ಬೆಂಗಳೂರಿನ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳು ಅತ್ಯಂತ ಸುಲಭವಾಗಿ ಲಭ್ಯವಿವೆ. ಬ್ಲಾಕ್ ಆಗಿರುವ ಫ್ಯಾಲೋಪಿಯನ್ ಟ್ಯೂಬ್‌ಗಳು, PCOS ಅಥವಾ ಇತ್ಯಾದಿ ಸಂಕೀರ್ಣ ಸಮಸ್ಯೆಗಳಿಗೆ ನೆಲಮಂಗಲದ ಸುತ್ತಮುತ್ತಲಿನ ಜನರಿಗೆ ನಮ್ಮ ತಜ್ಞರಿಂದ ಅತ್ಯುತ್ತಮ ಪರಿಹಾರ ದೊರೆಯುತ್ತಿದೆ. 

Honest & transparent IVF treatment cost in India

One clear price, explained before you begin — no surprise add-ons and no fine print at billing.

Know your treatment cost

See the lowest, average and highest cost for any treatment — add your details to reveal the figures.

₹6,00,000

Lowest cost

₹8,00,000

Average cost

₹12,00,000

Highest cost

Unlock your personalised cost

Get a detailed estimate and dedicated assistance from our care team.

+91

By continuing, you accept our Privacy Policy. The range shown is only an estimate and may differ after consultation.

Frequently Asked Questions

ಬೆಂಗಳೂರಿನಲ್ಲಿ ಅತ್ಯುತ್ತಮ ಐವಿಎಫ್ ತಜ್ಞರು ಯಾರು?

ಡಾ. ಮಂಜುನಾಥ್ ಸಿ.ಎಸ್. ಮತ್ತು ಡಾ. ಸ್ನೇಹದರ್ಶಿನಿ ಕಾರಂತ ಬಿರ್ಲಾ ಫರ್ಟಿಲಿಟಿ & ಐವಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಪ್ರಮುಖ ಫಲವಂತಿಕೆ ತಜ್ಞರು. ಇಬ್ಬರೂ ದಶಕಗಳ ಅನುಭವ ಮತ್ತು ಉತ್ತಮ ಯಶಸ್ಸಿನ ದಾಖಲೆ ಹೊಂದಿದ್ದಾರೆ.

ಸರಿಯಾದ ಐವಿಎಫ್ ತಜ್ಞರನ್ನು ಹೇಗೆ ಆಯ್ಕೆ ಮಾಡುವುದು?

ವೈದ್ಯರ ಅನುಭವ, ಅವರ ಹಿಂದಿನ ಯಶಸ್ಸಿನ ಪ್ರಮಾಣ, ಲ್ಯಾಬ್ ಸೌಲಭ್ಯ ಮತ್ತು ರೋಗಿಗಳ ಅಭಿಪ್ರಾಯಗಳನ್ನು ಗಮನಿಸಿ ಆಯ್ಕೆ ಮಾಡುವುದು ಸೂಕ್ತ. ಬೆಂಗಳೂರಿನ ಐವಿಎಫ್ ತಜ್ಞರೊಂದಿಗೆ ಒಮ್ಮೆ ಖುದ್ದು ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.

ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಎಷ್ಟು?

ರೋಗಿಯ ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಹಿಂದಿನ ವೈದ್ಯಕೀಯ ಇತಿಹಾಸಕ್ಕೆ ಅನುಗುಣವಾಗಿ ಯಶಸ್ಸಿನ ಪ್ರಮಾಣ ಸಾಮಾನ್ಯವಾಗಿ ಶೇಕಡಾ 60ರಿಂದ 70ರವರೆಗೆ ಇರುತ್ತದೆ. ಕೆಲವು ಪ್ರಕರಣಗಳಲ್ಲಿ ಇದು ಇನ್ನಷ್ಟು ಹೆಚ್ಚಿರಬಹುದು.

ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸೆಯ ವೆಚ್ಚ ಎಷ್ಟು?

ಚಿಕಿತ್ಸೆಯ ಪ್ರಕಾರ, ರೋಗಿಯ ದೈಹಿಕ ಅಗತ್ಯತೆ ಮತ್ತು ಬೇಕಾಗುವ ಔಷಧಿಗಳ ಆಧಾರದ ಮೇಲೆ ಒಟ್ಟು ವೆಚ್ಚ ಬದಲಾಗುತ್ತದೆ. ನಿಖರ ಅಂದಾಜಿಗಾಗಿ ನಮ್ಮ ತಜ್ಞರೊಂದಿಗೆ ಸಮಾಲೋಚನೆ ಕಾಯ್ದಿರಿಸುವುದು ಉತ್ತಮ.

ಫಲವಂತಿಕೆ ತಜ್ಞರನ್ನು ಯಾವಾಗ ಭೇಟಿಯಾಗಬೇಕು?

ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ನಿಯಮಿತವಾಗಿ ಪ್ರಯತ್ನಿಸಿದರೂ ಗರ್ಭಧಾರಣೆಯಾಗದಿದ್ದರೆ, ತಡಮಾಡದೆ ಐವಿಎಫ್ ತಜ್ಞರನ್ನು ಸಂಪರ್ಕಿಸುವುದು ಸೂಕ್ತ. 35 ವರ್ಷ ಮೇಲ್ಪಟ್ಟ ಮಹಿಳೆಯರು 6 ತಿಂಗಳ ನಂತರವೇ ಸಮಾಲೋಚನೆ ಪಡೆಯುವುದು ಒಳ್ಳೆಯದು.

ಬಿರ್ಲಾ ಫರ್ಟಿಲಿಟಿ & ಐವಿಎಫ್ ಬೆಂಗಳೂರಿನಲ್ಲಿ ಯಾವೆಲ್ಲಾ ಚಿಕಿತ್ಸೆಗಳು ಲಭ್ಯವಿವೆ?

ಐವಿಎಫ್, ಐಸಿಎಸ್‌ಐ, ಐಯುಐ, ಅಂಡಾಣು-ಭ್ರೂಣ ಫ್ರೀಜಿಂಗ್, ಲ್ಯಾಪ್ರೊಸ್ಕೋಪಿ, ಹಿಸ್ಟರೊಸ್ಕೋಪಿ, ಪುರುಷ ಬಂಜೆತನ ಚಿಕಿತ್ಸೆ ಹಾಗೂ ಮರುಕಳಿಸುವ ಐವಿಎಫ್ ವೈಫಲ್ಯ ನಿರ್ವಹಣೆ — ಇವೆಲ್ಲಾ ಸೌಲಭ್ಯಗಳು ಬೆಂಗಳೂರಿನ ನಮ್ಮ ಕೇಂದ್ರಗಳಲ್ಲಿ ಒಂದೇ ಸೂರಿನಡಿ ಲಭ್ಯವಿವೆ.